×
Ad

ಪೆಟ್ರೋಲ್, ಡೀಸೆಲ್ ಬೆಲೆ 10 ದಿನಗಳಲ್ಲಿ 9ನೇ ಬಾರಿ ಏರಿಕೆ

Update: 2022-03-31 10:20 IST

ಹೊಸದಿಲ್ಲಿ: ಪೆಟ್ರೋಲ್ ಹಾಗೂ  ಡೀಸೆಲ್ ಬೆಲೆಯನ್ನು ಗುರುವಾರ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದ್ದು, ಕಳೆದ 10 ದಿನಗಳಲ್ಲಿ 9ನೇ ಬಾರಿ ಏರಿಕೆಯಾಗಿದೆ. ಈ ಮೂಲಕ ಇಂಧನ ದರಗಳು ಲೀಟರ್‌ಗೆ ಒಟ್ಟು ರೂ.6.40 ಕ್ಕೆ ಏರಿಕೆಯಾದಂತಾಗಿದೆ.

ಇಂದು ಬೆಳಿಗ್ಗೆ ಹಣದುಬ್ಬರ ಹಾಗೂ  ಇಂಧನ ಬೆಲೆ ಏರಿಕೆ ವಿಷಯಗಳ ಕುರಿತು ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಆರಂಭಿಸಿದೆ. ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ದಿಲ್ಲಿಯ ವಿಜಯ್ ಚೌಕ್‌ನಲ್ಲಿ ಪಕ್ಷದ ಪ್ರತಿಭಟನೆಯ ನೇತೃತ್ವ ವಹಿಸುವ ನಿರೀಕ್ಷೆಯಿದೆ.

ದಿಲ್ಲಿಯಲ್ಲಿ ಪೆಟ್ರೋಲ್ ದರ ಈಗ ರೂ.101.81 ಆಗಿದ್ದರೆ, ಡೀಸೆಲ್ ದರಗಳು ಲೀಟರ್‌ಗೆ ರೂ.92.27 ರಿಂದ 93.07 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆ ತೋರಿಸಿದೆ.

ಮುಂಬೈನಲ್ಲಿ ಇಂಧನ ದರ ತಲಾ 84 ಪೈಸೆಗಳಷ್ಟು ಹೆಚ್ಚಳವಾಗುವುದರೊಂದಿಗೆ  ಪ್ರತಿ ಲೀಟರ್ ಪೆಟ್ರೋಲ್ ಹಾಗೂ  ಡೀಸೆಲ್ ದರಗಳು ಕ್ರಮವಾಗಿ ರೂ.116.72 ಮತ್ತು ರೂ. 100.94 ಕ್ಕೆ ತಲುಪಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News