ರಾಜಸ್ಥಾನ: ವೈದ್ಯೆ ಆತ್ಮಹತ್ಯೆ; ಕಿರುಕುಳ ನೀಡುವಂತೆ ಪ್ರಚೋದನೆ ನೀಡಿದ ಬಿಜೆಪಿ ನಾಯಕನ ಬಂಧನ

Update: 2022-03-31 17:34 GMT

ಜೈಪುರ, ಮಾ. 31: ಹೆರಿಗೆ ಸಂದರ್ಭ ಮಹಿಳೆಯೋರ್ವರು ಮೃತಪಟ್ಟ ಬಳಿಕ ವೈದ್ಯೆಗೆ ಕಿರುಕುಳ ನೀಡಲು ಗುಂಪಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಾಜಸ್ಥಾನದ ಸ್ಥಳೀಯ ಬಿಜೆಪಿ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾದ ವೈದ್ಯೆ ಡಾ. ಅರ್ಚನಾ ಶರ್ಮಾ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯಾ ಪತ್ರದಲ್ಲಿ ಡಾ. ಶರ್ಮಾ, ತಾನು ಅಮಾಯಕಿ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಚನಾ ಶರ್ಮಾ ಅವರ ಆತ್ಮಹತ್ಯೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜಸ್ಥಾನದ ದೌಸಾದಲ್ಲಿ ಡಾ. ಶರ್ಮಾ ಹಾಗೂ ಅವರ ಪತಿ ಆಸ್ಪತ್ರೆ ನಡೆಸುತ್ತಿದ್ದರು. ಈ ಆಸ್ಪತ್ರೆಯಲ್ಲಿ ಮಂಗಳವಾರ ಮಹಿಳೆಯೋರ್ವರು ಶಿಶುವಿಗೆ ಜನನ ನೀಡಿದ ಬಳಿಕ ರಕ್ತಸ್ರಾವದಿಂದ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬ ಡಾ. ಶರ್ಮಾ ಅವರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಡಾ. ಶರ್ಮಾ ಹಾಗೂ ಅವರ ಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ ಬಳಿಕವೇ ಕುಟುಂಬ ಪ್ರತಿಭಟನೆ ನಿಲ್ಲಿಸಿತ್ತು. ಎಫ್ಐಆರ್ ದಾಖಲಿಸಿರುವುದು ಹಾಗೂ ಪ್ರತಿಭಟನೆಯಿಂದ ಡಾ. ಶರ್ಮಾ ಅವರು ವಿಚಲಿತರಾಗಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News