×
Ad

ಆರ್ಯನ್‌ ಖಾನ್‌ ಪ್ರಕರಣದಲ್ಲಿ ಎನ್‌ಸಿಬಿ ಸಾಕ್ಷಿಯಾಗಿದ್ದ ಪ್ರಭಾಕರ ಸೈಲ್‌ ಸಾವು

Update: 2022-04-02 11:29 IST

ಮುಂಬೈ: ಕ್ರೂಸ್‌ ಹಡಗಿನಲ್ಲಿ ಮಾಕದ್ರವ್ಯ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ನನ್ನು ಬಂಧಿಸಿದ ಪ್ರಕರಣದಲ್ಲಿ ಎನ್‌ಸಿಬಿ ಸಾಕ್ಷಿಯಾಗಿದ್ದ ಪ್ರಭಾಕರ ಸೈಲ್‌ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ indiatoday.com ವರದಿ ಮಾಡಿದೆ. ಶುಕ್ರವಾರ ಮಧ್ಯಾಹ್ನ ಮಹುಲ್‌ ಪ್ರದೇಶದಲ್ಲಿನ ಅವರ ಬಾಡಿಗೆ ಅಪಾರ್ಟ್‌ಮೆಂಟ್‌ ನಲ್ಲಿ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲ ತುಷಾರ್ ಖಂಡಾರೆ, ಸೈಲ್ ಅವರು ಸಾವನ್ನು ದೃಢಪಡಿಸಿದ್ದು, ಸೈಲ್ ಅವರು ಮನೆಯಲ್ಲಿದ್ದರು ಹಾಗೂ ಅವರ ಸಾವಿನ ಹಿಂದೆ ಕುಟುಂಬವು ಯಾವುದೇ ದುಷ್ಕೃತ್ಯ ನಡೆದಿರುವುದಾಗಿ ಅನುಮಾನಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬಂಧಿಸಲ್ಪಟ್ಟ ಡ್ರಗ್ ಕ್ರೂಸ್ ಪ್ರಕರಣದಲ್ಲಿ ಸೈಲ್ ಇನ್ನೊಬ್ಬ ಸಾಕ್ಷಿ ಕೆಪಿ ಗೋಸಾವಿ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯಾಗಿದ್ದರು. ಗೋಸಾವಿ ಆರ್ಯನ್ ಖಾನ್‌ ಬಂಧನಕ್ಕೊಳಗಾದ ಬಳಿಕ ಆತನೊಂದಿಗಿದ್ದ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News