ತನ್ನ ಪ್ಯಾನ್‌ ಕಾರ್ಡ್‌ ಬಳಸಿ ದುಷ್ಕರ್ಮಿಗಳಿಂದ 2,500ರೂ. ವಂಚನೆ: ಬಾಲಿವುಡ್‌ ನಟ ರಾಜ್‌ಕುಮಾರ್‌ ರಾವ್‌ ಆರೋಪ

Update: 2022-04-02 08:21 GMT
Photo: Varinder Chawla

ಮುಂಬೈ: ತನ್ನ ಹೆಸರಿನ ಮೇಲೆ ಸಾಲ ಪಡೆಯಲು ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡ ಆಗಂತುಕರ ವಂಚನೆಗೆ ನಾನು ಬಲಿಯಾಗಿದ್ದೇನೆ ಎಂದು ನಟ ರಾಜ್‌ಕುಮಾರ್ ರಾವ್ ಹೇಳಿದ್ದಾರೆ.

37 ವರ್ಷದ ನಟ, ಈ ವಂಚನೆಯಿಂದಾಗಿ ತನ್ನ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಿದೆ ಮತ್ತು ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ (CIBIL) ನಲ್ಲಿನ ಅಧಿಕಾರಿಗಳನ್ನು ಈ ವಿಷಯವನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

"#FraudAlert ನನ್ನ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ನನ್ನ ಹೆಸರಿನಲ್ಲಿ ₹ 2,500 ಸಣ್ಣ ಸಾಲವನ್ನು ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ನನ್ನ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಿದೆ. @CIBIL_Official ದಯವಿಟ್ಟು ಅದನ್ನು ಸರಿಪಡಿಸಿ ಮತ್ತು ಇದರ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ," ಎಂದು ರಾಜ್‌ಕುಮಾರ್ ರಾವ್ ಟ್ವೀಟ್ ಮಾಡಿದ್ದಾರೆ.

CIBIL ನ ಅಧಿಕೃತ ಟ್ವಿಟರ್ ಖಾತೆಯು ನಟನಿಗೆ ಇನ್ನೂ ಉತ್ತರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News