×
Ad

ಪಾಕಿಸ್ತಾನದಲ್ಲಿ ಸರಕಾರ ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸುವಂತೆ ಕೇಳಿಕೊಂಡ ಇಮ್ರಾನ್‌ ಖಾನ್‌ !

Update: 2022-04-03 13:28 IST

ಇಸ್ಲಾಮಾಬಾದ್:‌ ಹಲವಾರು ದಿನಗಳಿಂದ ಪಾಕಿಸ್ತಾನದ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು, ಇದೀಗ ಇಂದು ನಡೆದ ಕ್ಷಿಪ್ರ ಘಟನೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಇಮ್ರಾನ್‌ ಖಾನ್‌ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ನಿರೀಕ್ಷಿತ ಅವಿಶ್ವಾಸ ನಿರ್ಣಯಕ್ಕೆ ಮುಂಚಿತವಾಗಿ ಅವರು ನೂತನ ಚುನಾವಣೆ ನಡೆಸುವಂತೆ ಘೋಷಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಜನರನ್ನುದ್ದೇಶಿಸಿ ಮಾತನಾಡಿದ ಇಮ್ರಾನ್‌ ಖಾನ್‌, "ಎಲ್ಲರೂ ಚುನಾವಣೆಗೆ ಸಿದ್ಧರಾಗಿ" ಎಂದು ಕರೆ ನೀಡಿದ್ದಾರೆ. ಸರಕಾರವನ್ನು ಕೆಳಗೆ ಉರುಳಿಸುವ ಪಿತೂರಿಯು ಇಲ್ಲವಾಗಿದೆ" ಎಂದೂ ಅವರು ಹೇಳಿದ್ದಾರೆ. ಭದ್ರತಾ ಬೆದರಿಕೆಯನ್ನು ಉಲ್ಲೇಖಿಸಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಉಪ ಸ್ಪೀಕರ್ ವಜಾಗೊಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News