×
Ad

ಹಲಾಲ್; ಸರಕಾರ ಎಲ್ಲರ ಭಾವನೆಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಿ: ಶೋಭಾ ಕರಂದ್ಲಾಜೆ

Update: 2022-04-03 19:35 IST

ಉಡುಪಿ : ಹಲಾಲ್ ಒಂದು ಧರ್ಮದ ವಿಚಾರವಾಗಿದೆ. ನಾವೆಲ್ಲರೂ ಹಲಾಲ್ ತಿನ್ನಬೇಕು ಎಂಬುದು ಸರಿಯಲ್ಲ. ಹಲಾಲ್ ಸರ್ಟಿಫಿಕೇಟ್ ಪಡೆಯಬೇಕೆಂಬ ನಿರ್ದೇಶನ ಜಾಸ್ತಿಯಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಿಟ್ಟೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ಹಲಾಲ್ ಮಾಂಸ ತಿನ್ನುವುದಕ್ಕೆ ನಮ್ಮದೇನು ವಿರೋಧ ಇಲ್ಲ. ಎಲ್ಲರಿಗೂ ಹಲಾಲ್ ತಿನ್ನಿಸಬೇಕು ಎಂಬ ಭಾವನೆ ಸರಿಯಲ್ಲ. ಈ ಬಗ್ಗೆ ಕೋರ್ಟ್‌ನಲ್ಲಿ ಕೇಸುಗಳು ಇವೆ. ಸರಕಾರ ಎಲ್ಲರ ಭಾವನೆಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಹಿಂದುತ್ವದ ಅಸ್ತ್ರ ಬಳಸಿ ಬಿಜೆಪಿ 150 ಸೀಟು ಗೆಲ್ಲಲಿದೆ ಎಂಬ ಕಾಂಗ್ರೆಸ್, ಜೆಡಿಎಸ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಸಚಿವರು, ಕಾಂಗ್ರೆಸ್- ಬಿಜೆಪಿಗೆ ಜನರನ್ನು ಓಟ್ ಬ್ಯಾಂಕ್ ಅಂತ ಅಂದುಕೊಂಡಿದ್ದಾರೆ. ಅಂದಿನಿಂದ ಇಂದಿನ ವರೆಗೆ ಮತದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದ್ದಾರೆ. ದೇಶದ ಜನ ಎರಡು ಪಕ್ಷಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News