ಬಿಸಲಕೊಪ್ಪದಲ್ಲಿ ʼಅರಣ್ಯವಾಸಿಗಳನ್ನು ಉಳಿಸಿʼ ಜಾಥ

Update: 2022-04-04 18:10 GMT

ಶಿರಸಿ: ಮುಂದಿನ ಆರವತ್ತು ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವು ಸುಪ್ರೀಂ ಕೋರ್ಟನಲ್ಲಿ ಅರಣ್ಯ ವಾಸಿಗಳನ್ನ ಒಕ್ಕಲೆಬ್ಬಿಸದೇ ಭೂಮಿ ಹಕ್ಕು ನೀಡುವ ವಾಗ್ವಾನದ ಪ್ರಮಾಣ ಪತ್ರ ಸಲ್ಲಿಸಬೇಕು, ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ಮನೆಯ ಮುಂದೆ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಎಚ್ಚರಿಸಿದ್ದಾರೆ.

ಅವರು ಇಂದು ಶಿರಸಿ ತಾಲೂಕಿನ, ಬಿಸಲಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜರುಗಿದ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ವೆಂಕಟೇಶ್ ಬೈಂದೂರ್ ಸ್ವಾಗತಿಸಿದರು, ದಾಕಪ್ಪ ಮಡಿವಾಳ ನಿರೂಪಣೆ ಮಾಡಿದರು, ಎಸ್ ಜಿ ಭಟ್ಟ ಉಲ್ಲಾಳ, ನೆಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಂಜಿ, ಸರೋಜಿನಿ ಭಟ್ಟ ಬಿಸಲಕೊಪ್ಪ, ಬಿಳ್ಯಪ್ಪ ಗೌಡ ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಾರ್ಮೆಲ್ ಫರ್ನಾಂಡಿಸ್ ಎಕ್ಕಂಬಿ, ಮೂಡುರು ಸಿದ್ದನ ಗೌಡ, ನಾಗಪ್ಪ ಯಾಲಕ್ಕಿ ಗ್ರಾಮ ಪಂ. ಸದಸ್ಯ, ಎಸ್ ಎಚ್ ಗೌಡ ಕೋಟೆಕೊಪ್ಪ, ಎಮ್ ಕೆ ನಾಯ್ಕ ಕಂಡ್ರಾಂಜಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅರಣ್ಯವಾಸಿಗಳ ಹಕ್ಕಿಗೆ ಸರಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಹೇಳಿದರು.

ಒಂದು ಲಕ್ಷಕ್ಕೂ ಮಿಕ್ಕಿ ಗಿಡ-ಮರ ನಾಶ

ಕಳೆದ ಐದು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಗಿಡ- ಮರ ಕಡೆದಿರುವ ಅರಣ್ಯ ಇಲಾಖೆಯ ನೀತಿ ಖಂಡನಾರ್ಹ. ಅರಣ್ಯ ಇಲಾಖೆಯ ಪರಿಸರ ವಿರೋಧಿ ನೀತಿಯ ವಿರುದ್ಧ ಸರಕಾರ ಗಂಭೀರವಾಗಿ ಪರಿಶೀಲನೆ ಮಾಡಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News