×
Ad

ಉಡುಪಿ: ಬುಧವಾರವೂ ಕೋವಿಡ್ ಶೂನ್ಯ ಸೋಂಕಿತರು

Update: 2022-04-06 21:07 IST

ಉಡುಪಿ‌ : ಜಿಲ್ಲೆಯಲ್ಲಿ ಬುಧವಾರ  ಸಹ ಯಾವುದೇ ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಉಳಿದಿರುವ ಏಕೈಕ ಕೋವಿಡ್ ಸೋಂಕಿತರು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಬುಧವಾರ ಒಟ್ಟು ೬೨ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸ ಲಾಗಿತ್ತು. ಉಡುಪಿ ತಾಲೂಕಿನ ೪೮, ಕುಂದಾಪುರದ ೯ ಹಾಗೂ ಕಾರ್ಕಳ ತಾಲೂಕಿನ ಐವರಲ್ಲಿ ಯಾರೂ ಸೋಂಕಿತರು ಪತ್ತೆಯಾಗಿಲ್ಲ.  

೬೮೯ ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ೧೨ರಿಂದ ೧೪ವರ್ಷದೊಳಗಿನ ಒಟ್ಟು ೬೮೯ ಮಕ್ಕಳಿಗೆ ಕೋವಿಡ್‌ನ ಮೊದಲ ಡೋಸ್ ಲಸಿಕೆಯನ್ನು ನೀಡಲಾ ಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು ೨೭೩೫೮ ಮಕ್ಕಳು ಈ ಲಸಿಕೆಯನ್ನು ಪಡೆದಂತಾಗಿದೆ.

ದಿನದಲ್ಲಿ ಒಟ್ಟು ೧೭೩೪ ಮಂದಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ೬೦ ವರ್ಷ ಮೇಲಿನ ೬೭೪ ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು ೭೨೩ ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ ಪಡೆದರೆ, ಒಟ್ಟು ೭೨೪ ಮಂದಿ ಮೊದಲ ಡೋಸ್ ಹಾಗೂ ೨೮೭ ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News