×
Ad

ಸತತ ಎರಡನೇ ದಿನ ಸಿಎನ್ ಜಿ ಬೆಲೆ ಹೆಚ್ಚಳ

Update: 2022-04-07 12:17 IST

ಹೊಸದಿಲ್ಲಿ: ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ ) ಬೆಲೆಯು ಸತತ ಎರಡನೇ ದಿನವಾದ ಗುರುವಾರ ಕಿಲೋಗ್ರಾಂಗೆ 2.5 ರೂ. ಏರಿಕೆ ಕಂಡಿತು. ಇದರೊಂದಿಗೆ ಸಿಎನ್ ಜಿ ಯ ಚಿಲ್ಲರೆ ದರವು ದಿಲ್ಲಿಯಲ್ಲಿ ಪ್ರತಿ ಕೆಜಿಗೆ 69.11 ರೂ. ಹಾಗೂ   ನೋಯ್ಡಾ, ಗ್ರೇಟರ್ ನೋಯ್ಡಾ ಹಾಗೂ  ಗಾಝಿಯಾಬಾದ್ ನಲ್ಲಿ ಪ್ರತಿ ಕೆಜಿಗೆ 71.67 ರೂ. ಏರಿಕೆಯಾಗಿದೆ.

ಸರಕಾರವು ಇನ್‌ಪುಟ್ ನೈಸರ್ಗಿಕ ಅನಿಲ ಬೆಲೆಗಳನ್ನು ದಾಖಲೆ ಮಟ್ಟಕ್ಕೆ ಏರಿಸಿದ ಬಳಿಕ ಬುಧವಾರ ದಿಲ್ಲಿ, ಮುಂಬೈ ಹಾಗೂ  ಗುಜರಾತ್‌ನಲ್ಲಿ ಸಿಎನ್‌ಜಿ ಬೆಲೆಗಳು ಏರಿಕೆ ಕಂಡಿದ್ದವು. ಒಂದು ವಾರದೊಳಗೆ  ಸಿಎನ್‌ಜಿಯ ಒಟ್ಟು ಚಿಲ್ಲರೆ ವೆಚ್ಚದಲ್ಲಿ ಪ್ರತಿ ಕೆಜಿಗೆ 9.10 ರೂ. ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News