×
Ad

ಲಡಾಖ್ ಸಮೀಪದ ವಿದ್ಯುತ್ ಗ್ರಿಡ್‍ಗಳಿಗೆ ಚೀನಾದ ಸೈಬರ್ ದಾಳಿ: ವರದಿ

Update: 2022-04-07 13:19 IST
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಚೀನಾದ ಸರಕಾರ ಪ್ರವರ್ತಿತ ಹ್ಯಾಕರ್ ಗಳು ಲಡಾಖ್ ಸಮೀಪದ ಭಾರತದ ವಿದ್ಯುತ್ ವಿತರಣಾ ಕೇಂದ್ರಗಳನ್ನು ಕಳೆದ ಎಂಟು ತಿಂಗಳ ಅವಧಿಯಲ್ಲಿ ಹ್ಯಾಕ್ ಮಾಡಿದ್ದರೆಂದು ಖಾಸಗಿ ಗುಪ್ತಚರ ಸಂಸ್ಥೆ ರೆಕಾರ್ಡೆಡ್ ಫ್ಯೂಚರ್ ಬುಧವಾರ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.

ದಾಳಿಗಳು ಕಳೆದ ವರ್ಷದ ಆಗಸ್ಟ್ ಹಾಗೂ ಈ ವರ್ಷದ ಮಾರ್ಚ್ ನಡುವೆ ನಡೆದಿದ್ದವು. ಉತ್ತರ ಭಾರತದಲ್ಲಿನ ಹಾಗೂ ಲಡಾಖ್‍ನಲ್ಲಿನ  ಭಾರತ-ಚೀನಾದ ವಿವಾದಿತ ಗಡಿ ಸಮೀಪವಿರುವ ವಿತರಣಾ ಕೇಂದ್ರಗಳ ಮೇಲೆ ಈ ಸೈಬರ್ ದಾಳಿ ನಡೆದಿದೆ ಎಂದು ಸಂಸ್ಥೆ ಹೇಳಿದೆ.

ಈ ಇಂಡಿಯನ್ ಲೋಡ್ ಡಿಸ್ಪ್ಯಾಚ್ ಸೆಂಟರ್‍ಗಳು ಅಥವಾ ವಿದ್ಯುತ್ ವಿತರಣಾ ಕೇಂದ್ರಗಳಿಂದ ಡೇಟಾವು ಜಗತ್ತಿನಾದ್ಯಂತದ ಚೀನಾ ಪ್ರವರ್ತಿತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳಿಗೆ ಹೋಗುತ್ತಿರುವುದು ತನಿಖೆಯಿಂದ ಪತ್ತೆಯಾಗಿದೆ,'' ಎಂದು ವರದಿ ಹೇಳಿದೆ.

ಇದೇ ತಂಡವು ರಾಷ್ಟ್ರೀಯ ವಿಪತ್ತು ನಿರ್ವಹಣಾ ವ್ಯವಸ್ಥೆ ಹಾಗೂ ಬಹುರಾಷ್ಟ್ರೀಯ ಲಾಜಿಸ್ಟಿಕ್ಸ್ ಸಂಸ್ಥೆಯ ಭಾರತೀಯ ಅಂಗಸಂಸ್ಥೆಯನ್ನೂ ಟಾರ್ಗೆಟ್ ಮಾಡಿತ್ತೆಂದು ತಿಳಿದು ಬಂದಿದೆ.

ವರದಿ ಹೊರತರುವ ಮುನ್ನ ಸರಕಾರಕ್ಕೆ ಮಾಹಿತಿ ನೀಡಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ, ಆದರೆ ಸರಕಾರ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News