×
Ad

ವಿಮೆ ವಿಚಾರ: ದಿಲ್ಲಿ-ಮಾಸ್ಕೊ ವಿಮಾನ ಹಾರಾಟ ರದ್ದುಪಡಿಸಿದ ಏರ್ ಇಂಡಿಯಾ

Update: 2022-04-07 15:00 IST

ಹೊಸದಿಲ್ಲಿ: ಉಕ್ರೇನ್‌ನ ಮೇಲೆ ರಶ್ಯದ ಆಕ್ರಮಣದ ಬೆದರಿಕೆಯ ಭೀತಿ ಹೆಚ್ಚಿದ ಹಿನ್ನೆಲೆಯಲ್ಲಿ ವಿಮಾ ರಕ್ಷಣೆಯನ್ನು ಪಡೆಯಲು ಸಾಧ್ಯವಾಗದ ಕಾರಣ ಏರ್ ಇಂಡಿಯಾವು ದಿಲ್ಲಿಯಿಂದ ಮಾಸ್ಕೋಗೆ ವಾರಕ್ಕೆ ಎರಡು ಬಾರಿ ಹಾರಾಟವನ್ನು ರದ್ದುಗೊಳಿಸಿದೆ ಎಂದು ಮೂಲಗಳು ಬುಧವಾರ NDTV ಗೆ ತಿಳಿಸಿವೆ.

ಎಲ್ಲಾ ಏರ್ ಇಂಡಿಯಾ ವಿಮಾನಗಳು ಅಂತರಾಷ್ಟ್ರೀಯ ಏಜೆನ್ಸಿಗಳಿಂದ ವಿಮೆ ಮಾಡಲ್ಪಟ್ಟಿವೆ ಎಂದು ಮೂಲಗಳು ತಿಳಿಸಿವೆ.

 ಉಕ್ರೇನ್ ಮೇಲೆ ರಶ್ಯದ ದಾಳಿಯ ನಂತರವೂ ರಶ್ಯದ ವಾಯುಪ್ರದೇಶ ಬಳಸುವುದನ್ನು ಮುಂದುವರಿಸುತ್ತಿರುವ ವಿಮಾನಯಾನ ಸಂಸ್ಥೆಯ ಪೈಕಿ ಏರ್ ಇಂಡಿಯಾವೂ ಸೇರಿದೆ.

ಇದೀಗ ಟಾಟಾ ಗ್ರೂಪ್‌ನಿಂದ ನಿಯಂತ್ರಿಸಲ್ಪಡುತ್ತಿರುವ ಏರ್ ಇಂಡಿಯಾ ವಿಮಾನವು ದಿಲ್ಲಿ-ಮಾಸ್ಕೋ-ದಿಲ್ಲಿ ಮಾರ್ಗದಲ್ಲಿ ಟಿಕೆಟ್‌ಗಳ ಮಾರಾಟವನ್ನು ನಿಲ್ಲಿಸಿದೆ ಹಾಗೂ ವಿಮಾನದ ಭವಿಷ್ಯವು ಅಸ್ಪಷ್ಟವಾಗಿದೆ ಎಂದು ರಶ್ಯದ ರಾಯಭಾರ ಕಚೇರಿ ಬುಧವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News