×
Ad

ಆಂಧ್ರಪ್ರದೇಶ: ಗೇರು ತೋಟ ಕಬಳಿಕೆ ವಿರೋಧಿಸಿ ಕುತ್ತಿಗೆಗೆ ಕುಣಿಕೆ ಹಾಕಿಕೊಂಡ ಮಹಿಳೆಯರು

Update: 2022-04-08 15:10 IST

ಹೈದರಾಬಾದ್: ಆಂಧ್ರಪ್ರದೇಶದ ಉರವಕೊಂಡ ಪಟ್ಟಣದಲ್ಲಿ  ಗೇರು ತೋಟವನ್ನು  ಕಬಳಿಸುತ್ತಿರುವುದನ್ನು ವಿರೋಧಿಸಿ ಬುಡಕಟ್ಟು  ಜನಾಂಗದ  ಮಹಿಳೆಯರು ತಮ್ಮ ಸೀರೆಯನ್ನು ಕುತ್ತಿಗೆಗೆ ಕುಣಿಕೆ ಹಾಕಿಕೊಂಡು ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ.

"ನಮ್ಮ ಮನವಿಗೆ ಸರಕಾರ ಕಿವಿಗೊಡದಿದ್ದರೆ ನಮಗೆ ಸಾವು ಮಾತ್ರ ಉಳಿದಿದೆ" ಎಂದು ಮಹಿಳೆಯರು ಹೇಳುತ್ತಿದ್ದಾರೆ.

"ನೀವು ಇಲ್ಲಿ ಗೇರು ತೋಟಗಳನ್ನು ನಾಶಪಡಿಸಿದರೆ, ನಮಗೆ  ಸಾವನ್ನು ಅಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.  ಏಕೆಂದರೆ ನಮ್ಮ ಜೀವನವು ಈ ತೋಟಗಳನ್ನು ಅವಲಂಬಿತವಾಗಿದೆ" ಎಂದು ಮಹಿಳೆಯರು ಹೇಳಿದರು.

ತಾವು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಬಲವಂತವಾಗಿ ಕಬಳಿಸಿ ಗ್ರಾನೈಟ್ ಗಣಿ ಕಂಪನಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

''ನಾವು ಯಾವುದೇ ಗ್ರಾನೈಟ್ ಕಂಪನಿಯಿಂದ ಹಣ ತೆಗೆದುಕೊಂಡಿಲ್ಲ.  ಕೆಲವರು ನಮ್ಮ ಜಮೀನುಗಳನ್ನು ಹಣಕ್ಕೆ ಬದಲಾಗಿ ಅಕ್ರಮವಾಗಿ ನೀಡಿದ್ದಾರೆ, ನಮ್ಮ ಬಳಿ ಭೂ ಮಾಲೀಕತ್ವದ ದಾಖಲೆಗಳಿಲ್ಲ.  ಈ ಭೂಮಿಯನ್ನು ನಾವು ಸಾಗುವಳಿ ಮಾಡಲು ಸರಕಾರ ಅನುಮತಿ ನೀಡಿತ್ತು. ಆದರೆ ಈಗ ಅವರು ಗೇರು ತೋಟ  ಸಮತಟ್ಟು ಮಾಡಲು ಜೆಸಿಬಿಗಳನ್ನು ತರುತ್ತಿದ್ದಾರೆ''ಎಂದು ಮಹಿಳೆಯರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News