×
Ad

ಭಾರತದಲ್ಲಿನ ಎಲ್‍ಪಿಜಿ ಬೆಲೆ ಜಗತ್ತಿನಲ್ಲಿಯೇ ಗರಿಷ್ಠ: ಪೆಟ್ರೋಲ್‌ ಬೆಲೆಯಲ್ಲಿ ಸ್ಥಾನವೆಷ್ಟು ಗೊತ್ತೇ?

Update: 2022-04-08 15:37 IST

ಹೊಸದಿಲ್ಲಿ: ದೇಶೀಯ ಮಾರುಕಟ್ಟೆಯಲ್ಲಿ ಆಯಾಯ ದೇಶಗಳ ಕರೆನ್ಸಿಗಳ ಖರೀದಿ ಸಾಮರ್ಥ್ಯವನ್ನು ಪರಿಗಣಿಸಿದರೆ, ಭಾರತದಲ್ಲಿ ತಲಾ ಲೀಟರ್ ಎಲ್‍ಪಿಜಿ ಬೆಲೆ ಜಗತ್ತಿನಲ್ಲಿಯೇ ಅತ್ಯಧಿಕವಾಗಿದೆ. ಅಂತೆಯೇ ಗರಿಷ್ಠ ಪೆಟ್ರೋಲ್ ಬೆಲೆಯಲ್ಲಿ ಭಾರತ ಜಗತ್ತಿನಲ್ಲಿಯೇ ಮೂರನೇ ಸ್ಥಾನದಲ್ಲಿದ್ದರೆ ಡೀಸೆಲ್ ಬೆಲೆ ಜಗತ್ತಿನಲ್ಲಿಯೇ ಗರಿಷ್ಠ ಬೆಲೆಗಳಲ್ಲಿ ಎಂಟನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.

54 ದೇಶಗಳ ಎಲ್‍ಪಿಜಿ ಬೆಲೆಗಳನ್ನು ಪರಿಗಣಿಸಿದಾಗ ಭಾರತದಲ್ಲಿ  ತಲಾ ಲೀಟರ್ ಬೆಲೆ 3.5 ಡಾಲರ್ ಆಗಿದ್ದು ಇದು ಗರಿಷ್ಠವಾಗಿದ್ದರೆ ನಂತರದ ಅತ್ಯಧಿಕ ಬೆಲೆಗಳನ್ನು ಹೊಂದಿರುವ ರಾಷ್ಟ್ರಗಳೆಂದರೆ ಟರ್ಕಿ, ಫಿಜಿ, ಮೊಲ್ಡೋವ ಮತ್ತು ಉಕ್ರೇನ್.  ಇದಕ್ಕೆ ತದ್ವಿರುದ್ಧವೆಂಬಂತೆ ಸ್ವಿಝರ್‌ಲ್ಯಾಂಡ್, ಫ್ರಾನ್ಸ್, ಕೆನಡಾ ಮತ್ತು ಇಂಗ್ಲೆಂಡ್‍ನಲ್ಲಿ ಎಲ್‍ಪಿಜಿ ಬೆಲೆ ಲೀಟರ್‍ಗೆ ಒಂದು ಡಾಲರ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News