×
Ad

ಸೋನಂ ಕಪೂರ್ ಅವರ ದಿಲ್ಲಿ ನಿವಾಸದಲ್ಲಿ ದರೋಡೆ: 2.4 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಕಳವು

Update: 2022-04-09 14:50 IST
Photo:twitter

ಹೊಸದಿಲ್ಲಿ:  ನಟಿ ಸೋನಂ ಕಪೂರ್  ಹಾಗೂ  ಆನಂದ್ ಅಹುಜಾ ಅವರ ದಿಲ್ಲಿ ನಿವಾಸದಿಂದ  ಫೆಬ್ರವರಿಯಲ್ಲಿ 2.4 ಕೋಟಿ ರೂ. ಮೌಲ್ಯದ ನಗದು ಹಾಗೂ  ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಇಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 11 ರಂದು ದರೋಡೆ ನಡೆದಿದ್ದು, ಅಪರಾಧ ನಡೆದ ಸುಮಾರು ಎರಡು ವಾರಗಳ ನಂತರ ಫೆಬ್ರವರಿ 23 ರಂದು ಪೊಲೀಸರ ಮುಂದೆ ದೂರು ದಾಖಲಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಕ್ಷಣವೇ ಎಫ್‌ಐಆರ್ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News