ಮನೆಯ ಟೈಲ್ಸ್ ನಲ್ಲಿ ಜಾರಿ ಬಿದ್ದು ಮೃತ್ಯು
Update: 2022-04-09 21:28 IST
ಹಿರಿಯಡ್ಕ : ಮನೆಯ ಟೈಲ್ಸ್‌ನಲ್ಲಿ ಜಾರಿ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಎ.8ರಂದು ಸಂಜೆ ವೇಳೆ ಆತ್ರಾಡಿ ಗ್ರಾಮದ ಚೆನ್ನಿಬೆಟ್ಟುವಿನ ಮದಗ ಎಂಬಲ್ಲಿ ನಡೆದಿದೆ.
ಮೃತರನ್ನು ಮದಗ ನಿವಾಸಿ ವನಜ ಶೆಡ್ತಿ(70) ಎಂದು ಗುರುತಿಸಲಾಗಿದೆ. ಇವರು ಮನೆಯ ಸಮೀಪದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುವ ಮನೆಯ ಚಾವಾಡಿಯ ನೀರು ಇದ್ದ ಟೈಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.