ಗಾಂಜಾ ಸೇವನೆ: ಹಾಸನ ಮೂಲದ ಇಬ್ಬರು ವಶಕ್ಕೆ
Update: 2022-04-10 20:14 IST
ಮಣಿಪಾಲ, ಎ.10: ಮಣಿಪಾಲ ವಿದ್ಯಾರತ್ನನಗರದ ಕಾಯಿನ್ ಸರ್ಕಲ್ ಬಳಿ ಎ.9ರಂದು ಗಾಂಜಾ ಸೇವನೆಗೆ ಸಂಬಂಧಿಸಿ ಇಬ್ಬರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಾಸನ ಮೂಲದ ಮೇಘರಾಜು(30) ಮತ್ತು ಆಕಾಶ್ ಬಿ.ಎಸ್.(25) ಎಂಬವರನ್ನು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.