ದಲಿತ ಸಮುದಾಯದ ಕುರಿತು ಆಕ್ಷೇಪಾರ್ಹ ಭಾಷೆ ಬಳಕೆ: ಸುನೀಲ್ ಜಾಖಡ್ ಗೆ ಕಾಂಗ್ರೆಸ್ ನೋಟಿಸ್

Update: 2022-04-11 10:08 GMT

ಚಂಡೀಗಢ: ಮಾಜಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಕ್ಕಾಗಿ ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನೀಲ್ ಜಾಖಡ್ ಅವರಿಗೆ ಪಕ್ಷದ ಶಿಸ್ತು ಸಮಿತಿ ಜಾಖಡ್ ಅವರು ಏಳು ದಿನಗಳಲ್ಲಿ ನೋಟಿಸ್ ಗೆ ಪ್ರತಿಕ್ರಿಯಿಸಬೇಕು.

ಜಾಖಡ್ ಕಳೆದ ವಾರ ಟಿವಿ ಸಂದರ್ಶನದಲ್ಲಿ ನೀಡಿದ ಹೇಳಿಕೆಗೆ ಭಾರೀ ಆಕ್ರೋಶ ಎದುರಿಸಿದ್ದರು, ದಲಿತ ಕಾರ್ಯಕರ್ತರು ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದರು ಹಾಗೂ  ಸಮುದಾಯದ ವಿರುದ್ಧ "ಆಕ್ಷೇಪಾರ್ಹ ಭಾಷೆ" ಬಳಸಿದ್ದಕ್ಕಾಗಿ ಜಾಖಡ್ ಅವರನ್ನು ಉಚ್ಚಾಟಿಸಬೇಕೆಂದು ಪಕ್ಷದ ನಾಯಕರೊಬ್ಬರು ಒತ್ತಾಯಿಸಿದ್ದಾರೆ.

ಆದಾಗ್ಯೂ, ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಜಾಖಡ್ ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಸಂದರ್ಶನದ ವೀಡಿಯೊ ತುಣುಕುಗಳ ಪ್ರಕಾರ, ಜಾಖಡ್ ಅವರು ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯಾಗಿದ್ದ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ಚನ್ನಿ ಅವರ ಆಯ್ಕೆಗಾಗಿ ಪಕ್ಷದ ನಾಯಕತ್ವವನ್ನು ಪ್ರಶ್ನಿಸಿದ್ದಾರೆ. ಆದರೆ, ಅವರು ಯಾರ ಹೆಸರನ್ನೂ ಹೇಳಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News