×
Ad

ಯಕ್ಷಗಾನದ ವಿಪರೀತ ಬೆಳವಣಿಗೆ ಸೌಂದರ್ಯ ಪ್ರಜ್ಞೆಗೆ ಮಾರಕ: ಗುರುರಾಜ್ ಮಾರ್ಪಳ್ಳಿ

Update: 2022-04-11 19:03 IST

ಬ್ರಹ್ಮಾವರ : ಇಂದಿನ ಯಕ್ಷಗಾನ ಕ್ಷೇತ್ರದಲ್ಲಿನ ವಿಪರೀತ ಬೆಳವಣಿಗೆ ಅದರ ಒಟ್ಟಾರೆ ಸೌಂದರ್ಯ ಪ್ರಜ್ಞೆಗೆ ಮಾರಕವಾಗಿದೆ. ಚಾಲು ಕುಣಿತವು ಪದ್ಯದ ಬಹುಪಾಲು ಭಾಗವನ್ನು ಆಕ್ರಮಿಸಿಕೊಂಡು ಪ್ರಸಂಗದ ಮೂಲ ಉದ್ದೇಶವನ್ನೇ ಹಾಳುಗೆಡಹುತ್ತಿದೆ ಅತೀ ಅಗತ್ಯವಾಗಿ ಸೌಂಡ್ ಇಂಜಿನಿಯ ರಿಂಗನ್ನು ಯಕ್ಷಗಾನ ಕ್ಷೇತ್ರವು ಇಂದಿಗೆ ಅಳವಡಿಸಿಕೊಳ್ಳಲೇ ಬೇಕಾಗಿದೆ ಎಂದು  ವಿದ್ವಾಂಸ ಗುರುರಾಜ ಮಾರ್ಪಳ್ಳಿ ಹೇಳಿದ್ದಾರೆ.

ಭಾವನಾ ಪ್ರತಿಷ್ಠಾನ ಹಾವಂಜೆ ವತಿಯಿಂದ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಲಾದ ಸಮಾರಂಭದಲ್ಲಿ ಯಕ್ಷ ಕಲಾಸಿಂಧು ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಇದೇ ಸಂದರ್ಭದಲ್ಲಿ ಹಾವಂಜೆ ಮಂಜುನಾಥಯ್ಯನವರು ೧೯೭೧ರಲ್ಲಿ ರಚಿಸಿದ್ದ ಕ್ಷೇತ್ರ ಮಹಾತ್ಮೆ ಪುಸ್ತಕವನ್ನು ನಿವೃತ್ತ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣು ಭಟ್ ಬಿಡುಗಡೆಗೊಳಿಸಿದರು.  

ಮುಖ್ಯ ಅತಿಥಿಗಳಾಗಿ ಉಡುಪಿ ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾ ನಂದಕುಮಾರ್, ವಿದ್ವಾನ್ ಹೆರ್ಗ ಜಯರಾಮ ತಂತ್ರಿ, ಅರ್ಚಕ ರಾಜಾರಾಮ ಮಧ್ಯಸ್ಥ, ಹಾವಂಜೆ ಗ್ರಾಪಂ ಅಧ್ಯಕ್ಷ ಅಜಿತ್ ಗೋಳಿಕಟ್ಟೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್ ಬಿ.ಶೆಟ್ಟಿ ವಹಿಸಿದ್ದರು.

ಪ್ರಸಂಗಕರ್ತ ಹಾವಂಜೆ ಮಂಜುನಾಥ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಭಾವನಾ ಪ್ರತಿಷ್ಠಾನದ ಡಾ.ಜನಾರ್ದನ ಹಾವಂಜೆ ಸನ್ಮಾನ ಪತ್ರ ವಾಚಿಸಿ ದರು. ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News