ಎಸ್ಸೆಸ್ಸೆಫ್ ಕೆಸಿ ನಗರ ವತಿಯಿಂದ ರಮಝಾನ್ ಕಿಟ್ ವಿತರಣೆ
Update: 2022-04-11 21:10 IST
ತಲಪಾಡಿ : ಎಸ್ಸೆಸ್ಸೆಫ್ ಕೆಸಿ ನಗರ ಯುನಿಟ್ ವತಿಯಿಂದ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮವು ಮುಸ್ತಫಾ ಅವರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಕಚೇರಿಯಲ್ಲಿ ಜರಗಿತು.
ಅಶ್ರಫ್ ಮುಸ್ಲಿಯಾರ್ ದುಆಗೈದರು. ಕೆಸಿ ನಗರ ಮಸೀದಿಯ ಖತೀಬ್ ಉನೈಸ್ ಸಖಾಫಿ ಪ್ರವಚನ ನೀಡಿದರು. ಈ ಸಂದರ್ಭ ಮಸೀದಿಯ ಅಧ್ಯಕ್ಷ ಯುಸಿ ಅಬ್ಬಾಸ್ ಕೆಸಿ ನಗರ. ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ದುಲ್ ಖಾದರ್ ಹಾಜಿ ಕೆಸಿ ನಗರ. ಎಸ್‌ವೈ ಎಸ್ ಕಾರ್ಯದರ್ಶಿ ಬಶೀರ್ ಕಿನ್ಯ. ಸಿರಾಜ್ ಎಎಚ್, ಸಮದ್ ಕೆಸಿ ನಗರ, ಮಸೀದಿಯ ಕಾರ್ಯದರ್ಶಿ ಇಕ್ಬಾಲ್ ಎಂಎ, ಅಬ್ದುಲ್ ನಾಸಿರ್ ಕೆಸಿ ನಗರ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಕಾರ್ಯದರ್ಶಿ ಅಫ್ರಿದಿ ಸ್ವಾಗತಿಸಿ, ವಂದಿಸಿದರು.