ಭಾರತದಲ್ಲಿನ 'ಮಾನವ ಹಕ್ಕು ಉಲ್ಲಂಘನೆ'ಗಳನ್ನು ಅಮೆರಿಕ ಅವಲೋಕಿಸುತ್ತಿದೆ ಎಂದ ಸೆಕ್ರಟರಿ ಆಫ್ ಸ್ಟೇಟ್ ಬ್ಲಿಂಕೆನ್

Update: 2022-04-14 06:12 GMT
ಅಮೆರಿಕಾದ ಸೆಕ್ರಟರಿ ಆಫ್ ಸ್ಟೇಟ್ ಆ್ಯಂಟನಿ ಬ್ಲಿಂಕೆನ್ (AP/PTI)

ವಾಷಿಂಗ್ಟನ್: ಭಾರತದಲ್ಲಿ ಕೆಲವು ಅಧಿಕಾರಿಗಳಿಂದ 'ಮಾನವ ಹಕ್ಕುಗಳ ಉಲ್ಲಂಘನೆ' ಪ್ರಕರಣಗಳನ್ನು ಅಮೆರಿಕಾ ಅವಲೋಕಿಸುತ್ತಿದೆ ಎಂದು ಅಮೆರಿಕಾದ ಸೆಕ್ರಟರಿ ಆಫ್ ಸ್ಟೇಟ್ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ. ಬಹು ಅಪರೂಪವೆಂಬಂತೆ ಭಾರತ ಸರಕಾರವನ್ನು ಅಮೆರಿಕ ಈ ಮೂಲಕ ನೇರವಾಗಿ ಟಾರ್ಗೆಟ್ ಮಾಡಿದೆ.

"ನಾವು ನಮ್ಮ ಭಾರತೀಯ ಪಾಲುದಾರರೊಂದಿಗೆ ಈ ಹಂಚಿತ ಮೌಲ್ಯಗಳ(ಮಾನವ ಹಕ್ಕುಗಳು) ಬಗ್ಗೆ ಆಗಾಗ ಮಾತನಾಡುತ್ತೇವೆ, ಈ ನಿಟ್ಟಿನಲ್ಲಿ ಭಾರತದಲ್ಲಿ ಇತ್ತೀಚೆಗೆ ಕೆಲ ಸರಕಾರ, ಪೊಲೀಸ್ ಮತ್ತು ಕಾರಾಗೃಹ ಅಧಿಕಾರಿಗಳಿಂದ  ಹೆಚ್ಚುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳನ್ನು ನಾವು ಅವಲೋಕಿಸುತ್ತಿದ್ದೇವೆ,'' ಎಂದು  ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಇದಕ್ಕಿಂತ ಹೆಚ್ಚು ಬ್ಲಿಂಕೆನ್ ವಿವರಿಸದೇ ಇದ್ದರೂ. ಅವರ ನಂತರ ಮಾತನಾಡಿದ ಜೈಶಂಕರ್ ಮತ್ತು ರಾಜನಾಥ್ ಸಿಂಗ್ ಇಬ್ಬರೂ ಮಾನವ ಹಕ್ಕುಗಳ ವಿಚಾರ ಪ್ರಸ್ತಾಪಿಸಲಿಲ್ಲ.

ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಸಂಬಂಧಿಸಿದತೆ ನರೇಂದ್ರ ಮೋದಿ ಸರಕಾರವನ್ನು ಟೀಕಿಸಲು ಅಮೆರಿಕ ಹಿಂಜರಿಯುತ್ತಿರುವುದನ್ನು ಅಮೆರಿಕ ಸಂಸದೆ ಇಲ್ಹಾನ್ ಒಮರ್ ಅವರು ಇತ್ತೀಚೆಗೆ ಪ್ರಶ್ನಿಸಿದ ನಂತರದ ಬೆಳವಣಿಗೆ ಇದಾಗಿದೆ.

"ನಾವು ಭಾರತವನ್ನು ಶಾಂತಿಯ ಜತೆಗೆ ನಮ್ಮ ಪಾಲುದಾರರಾಗಿಸುವುದನ್ನು ನಿಲ್ಲಿಸುವ ಮೊದಲು ಮೋದಿ ಭಾರತದ ಮುಸ್ಲಿಂ ಜನಸಂಖ್ಯೆಗೆ ಏನು ಮಾಡಬೇಕಿದೆ?,"ಎಂದು ಜೋ ಬೈಡೆನ್ ಅವರ  ಡೆಮಾಕ್ರೆಟಿಕ್ ಪಾರ್ಟಿಯವರಾಗಿರುವ ಒಮರ್ ಕಳೆದ ವಾರ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News