×
Ad

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಲಾಡ್ಜ್‌ಗೆ ಆಗಮಿಸಿ ಕುಟುಂಬಸ್ಥರನ್ನು ಭೇಟಿಯಾದ ಸೊರಕೆ

Update: 2022-04-13 22:01 IST

ಉಡುಪಿ : ಉಡುಪಿ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಅವರ ಕುಟುಂಬದ ವರನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಲಾಡ್ಜ್ ಹೊರಗೆ ಭೇಟಿ ಮಾಡಿ ಸಾಂತ್ವಾನ ಹೇಳಿದರು.

ಲಾಡ್ಜ್ ಒಳಗೆ ಪಂಚನಾಮೆ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಸಂತೋಷ್ ಪಾಟೀಲ್ ಕುಟುಂಬಸ್ಥರ ಭೇಟಿಗೆ ಆಗಮಿಸಿದ ವಿನಯ ಕುಮಾರ್ ಸೊರಕೆಗೆ ಪೊಲೀಸರು ತನಿಖೆ ಹಿನ್ನೆಲೆಯಲ್ಲಿ ಅವಕಾಶ ನಿರಾಕರಿಸಿದರು. ಪಂಚನಾಮೆ ಮುಗಿದ ಬಳಿಕ ಭೇಟಿಗೆ ಅವಕಾಶ ನೀಡುವುದಾಗಿ ಪೊಲೀಸರು ಸೊರಕೆ ಅವರಿಗೆ ತಿಳಿಸಿದರು.
ಅದರಂತೆ ಲಾಡ್ಜ್ ಹೊರಗೆ ಕಾರಿನ ಪಂಚನಾಮೆ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಮತ್ತೆ ಆಗಮಿಸಿದ ಸೊರಕೆ, ಸಂತೋಷ್ ಪಾಟೀಲ್ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾ ಡಿದ ಸೊರಕೆ, ಇದೊಂದು ದೊಡ್ಡ ದುರಂತ. ರೈತರು ಆತ್ಮಹತ್ಯೆ ಮಾಡಿಕೊಳ್ಳು ವುದನ್ನು ನಾವು ನೋಡಿದ್ದೇವೆ. ೪೦ ಪರ್ಸೆಂಟ್ ಕಮಿಷನ್‌ಗಾಗಿ ಆತ್ಮಹತ್ಯೆ ದೇಶದಲ್ಲೇ ಪ್ರಥಮ. ಇನ್ನು ಅನೇಕರು ಕಾಮಗಾರಿ ಆದೇಶ ಇಲ್ಲದೆ ಗುತ್ತಿಗೆ ಕೆಲಸ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ತಿಳಿಸಿದರು.

ಆಪಾದನೆ ಬಂದಾಗ ಜಾರ್ಜ್ ರಾಜಿನಾಮೆ ಕೊಟ್ಟಿದ್ದಾರೆ. ಈಶ್ವರಪ್ಪ ರಾಜೀ ನಾಮೆ ಕೊಟ್ಟು ಘನಸ್ತಿಕೆ ಉಳಿಸಿಕೊಳ್ಳಲಿ. ತಕ್ಷಣ ಈಶ್ವರಪ್ಪರನ್ನು ಬಂಧಿಸಬೇಕು. ತಡ ಮಾಡದೆ ತಕ್ಷಣ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಜನರೇ ರೊಚ್ಚಿಗೆದ್ದು ರಾಜಿನಾಮೆ ಕೊಡಿಸುತ್ತಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News