×
Ad

ಮಣಿಪಾಲ: ಜೈಪುರ ಕೃತಕ ಕಾಲು ಜೋಡಣಾ ಶಿಬಿರ ಪ್ರಾರಂಭ

Update: 2022-04-16 21:44 IST

ಮಣಿಪಾಲ : ರೋಟರಿ ಕ್ಲಬ್ ಮಣಿಪಾಲ, ಭಗವಾನ್ ಮಹಾವೀರ ವಿಕಲಾಂಗ ಸಹಾಯಕ ಸಮಿತಿ ಬೆಂಗಳೂರು ಮತ್ತು ಪೇಜಾವರ ಮಠ ಉಡುಪಿ ಇವುಗಳ ಸಹಯೋಗದಲ್ಲಿ ಉಚಿತ ಜೈಪುರ ಕೃತಕ ಕಾಲು ಜೋಡನಾ ಶಿಬಿರಕ್ಕೆ ರೋಟರಿ ಕ್ಲಬ್ ಮಣಿಪಾಲದ ಆವರಣದಲ್ಲಿ ಚಾಲನೆ ನೀಡಲಾಯಿತು.

ಸುಮಾರು ೨೦ ಲಕ್ಷ ರೂ. ವೆಚ್ಚದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಟಿ.ಎಂ.ಎ. ಪೈ ಪ್ರತಿಷ್ಟಾನದ ಕಾರ್ಯದರ್ಶಿ ಟಿ. ಅಶೋಕ್ ಪೈ, ರೋಟರಿ ಕ್ಲಬ್ ಮಣಿಪಾಲದ ಸಮಾಜ ಸೇವಾ ಚಟುವಟಿಕೆ ಗಳನ್ನು ಪ್ರಶಂಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಆರೋಗ್ಯ ಇಲಾಖೆ ಮಾಡಬೇಕಾದ ಕೆಲಸವನ್ನು ರೋಟರಿ ಸೇವಾ ಸಂಸ್ಥೆ ನಡೆಸುತ್ತಿರುವುದು ಅಭಿನಂದನೀಯ ಎಂದರು.

ಬಿ.ಎಂ.ವಿ.ಎಸ್.ಎಸ್ ಮುಖ್ಯಸ್ಥರಾದ ಅನಿಲ್ ಸುರಾನ, ಡಾ.ಗಿರಿಜಾ ರಾವ್, ನಿಯೋಜಿತ ಜಿಲ್ಲಾ ಗವರ್ನರ್ ಡಾ.ಗೌರಿ, ಡಾ.ಸುರೇಶ್ ಶೆಣಿೈ, ಅಮಿತ್ ಅರವಿಂದ್, ರಾಜವರ್ಮ ಅರಿಗ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಡಾ.ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು. ರೇಣು ಜಯರಾಂ ಕಾರ್ಯಕ್ರಮ ನಿರೂಪಿಸಿದರು.
ಐದು ದಿನಗಳ ಕಾಲ ನಡೆಯುವ ಶಿಬಿರಕ್ಕೆ ಒಟ್ಟು ೫೦೦ ಮಂದಿ ಹೆಸರು ನೋಂದಾವಣೆ ಮಾಡಿದ್ದು, ೧೦೦ಕ್ಕೂ ಹೆಚ್ಚಿನ ಫಲಾನುಭವಿಗಳು ಮೊದಲ ದಿನ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಶನಿವಾರ ಬೆಳಗ್ಗೆ ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕೆಎಂಸಿಯ ಸರ್ಜನ್ ಡಾ. ಅನಿಲ್ ಭಟ್ ಮುಖ್ಯಅತಿಥಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News