'ಸರಕಾರದ ನಿರ್ಲಕ್ಷ್ಯ'ದಿಂದ 40 ಲಕ್ಷ ಭಾರತೀಯರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ: ರಾಹುಲ್ ಗಾಂಧಿ

Update: 2022-04-17 09:57 GMT

ಹೊಸದಿಲ್ಲಿ: ಕೊರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸರಕಾರದ ನಿರ್ಲಕ್ಷ್ಯದಿಂದಾಗಿ ಐದು ಲಕ್ಷ ಅಲ್ಲ 40 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಹೇಳಿದ್ದಾರೆ ಕೋವಿಡ್ ನಿಂದ ತಮ್ಮ ಪ್ರೀತಿಪಾತ್ರರನ್ನು  ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ತಲಾ  4 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಮತ್ತೊಮ್ಮೆ ಒತ್ತಾಯಿಸಿದ್ದಾರೆ.

ಟ್ವಿಟರ್‌ನಲ್ಲಿ 'ನ್ಯೂಯಾರ್ಕ್ ಟೈಮ್ಸ್' ವರದಿಯ ಸ್ಕ್ರೀನ್‌ಶಾಟ್ ಅನ್ನುರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಜಾಗತಿಕ ಕೋವಿಡ್ ಸಾವಿನ ಸಂಖ್ಯೆಯನ್ನು ಸಾರ್ವಜನಿಕಗೊಳಿಸಲು ಡಬ್ಲ್ಯು ಎಚ್ ಒ ನ ಪ್ರಯತ್ನಗಳನ್ನು ಭಾರತ ತಡೆಯುತ್ತಿದೆ ಎಂದು ವರದಿ ಹೇಳಿಕೊಂಡಿದೆ.

"ಮೋದಿ ಜೀ ಸತ್ಯವನ್ನು ಮಾತನಾಡುವುದಿಲ್ಲ ಅಥವಾ ಇತರರನ್ನು ಮಾತನಾಡಲು ಬಿಡುವುದಿಲ್ಲ, ಆಮ್ಲಜನಕದ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಅವರು ಇನ್ನೂ ಸುಳ್ಳು ಹೇಳುತ್ತಾರೆ!"ಎಂದು  ವರದಿಯ ಸ್ಕ್ರೀನ್‌ಶಾಟ್‌ನೊಂದಿಗೆ ಹಿಂದಿಯಲ್ಲಿ ರಾಹುಲ್ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

" ಕೋವಿಡ್ ಸಮಯದಲ್ಲಿ ಸರಕಾರದ ನಿರ್ಲಕ್ಷ್ಯದಿಂದಾಗಿ ಐದು ಲಕ್ಷ ಅಲ್ಲ, 40 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ. ಪ್ರತಿ ಕೋವಿಡ್ ಸಂತ್ರಸ್ತರ ಕುಟುಂಬಕ್ಕೆ ರೂ. 4 ಲಕ್ಷ ಪರಿಹಾರವನ್ನು ನೀಡಿ ನಿಮ್ಮ ಜವಾಬ್ದಾರಿಯನ್ನು ಪೂರೈಸಿ ಮೋದಿ ಜೀ’’ ಎಂದು ರಾಹುಲ್ ಗಾಂಧಿ ಟ್ವೀಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News