ಆತ್ರಾಡಿ ಅನ್ಸಾರುಲ್ ಮಸಾಕೀನ್ ಅಧ್ಯಕ್ಷರಾಗಿ ಇಮ್ರಾನ್ ಆಯ್ಕೆ
Update: 2022-04-17 18:33 IST
ಉಡುಪಿ : ಆತ್ರಾಡಿಯ ಅನ್ಸಾರುಲ್ ಮಸಾಕೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ೨೦೨೨-೨೩ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇಮ್ರಾನ್ ದೇವಿನಗರ, ಉಪಾಧ್ಯಕ್ಷರಾಗಿ ಅಬ್ದುಲ್ ತವ್ವಾಬ್, ಕೋಶಾಧಿಕಾರಿಯಾಗಿ ಸಲೀಂ ಶಾಲಿಮಾರ್, ಕಾರ್ಯದರ್ಶಿಯಾಗಿ ಇರ್ಫಾನ್ ದೇವಿನಗರ, ಜತೆ ಕಾರ್ಯದರ್ಶಿಯಾಗಿ ಶಂಶುದ್ದೀನ್ ಅತ್ರಾಡಿ, ಸದಸ್ಯರು ಗಳಾಗಿ ಅಬ್ದುಲ್ ಸಮದ್ ದೇವಿನಗರ, ಅಬ್ದುಲ್ ಸಲಾಂ ದೇವಿನಗರ, ಜೇಶ್ವೀದ್ ದೇವಿನಗರ, ಫೈಝಲ್ ಅತ್ರಾಡಿ, ಶರ್ಫುದ್ದೀನ್ ತಟ್ಟೂರು, ಶಾಹಿಲ್ ದೇವಿನಗರ, ಅಶ್ರಫ್ ಕಬ್ಯಾಡಿ, ಮುಹಮ್ಮದ್ ವಾಸಿಲ್ ಅವರನ್ನು ಆಯ್ಕೆ ಮಾಡಲಾಯಿತು.