ಜಹಾಂಗಿರಪುರಿ ಹಿಂಸಾಚಾರ: ಐವರ ವಿರುದ್ಧ ಕಠಿಣ ಎನ್‌ಎಸ್‌ಎ ಕಾಯ್ದೆಯಡಿ ಪ್ರಕರಣ ದಾಖಲು
Update: 2022-04-19 22:43 IST
ಹೊಸದಿಲ್ಲಿ: ಜಹಾಂಗೀರಪುರಿಯಲ್ಲಿ ಶನಿವಾರ ನಡೆದ ಘರ್ಷಣೆಯ ಆರೋಪಿಗಳ ಪೈಕಿ ಐವರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ndtv.com ವರದಿ ಮಾಡಿದೆ.
ಎನ್ಎಸ್ಎ ಅಡಿಯಲ್ಲಿ ಆರೋಪ ಎದುರಿಸುತ್ತಿರುವವರಲ್ಲಿ
ಪ್ರಮುಖ ಆರೋಪಿ ಅನ್ಸಾರ್ ಸಹಿತ ಸಲೀಂ, ಇಮಾಮ್ ಶೇಖ್ ಅಥವಾ ಸೋನು, ದಿಲ್ಶಾದ್ ಮತ್ತು ಅಹಿರ್ ಎಂಬವರ ವಿರುದ್ಧ ಎನ್ಎಸ್ಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೂವರು ಬಾಲಾಪರಾಧಿಗಳು ಸೇರಿದಂತೆ 24 ಜನರನ್ನು ಇದುವರೆಗೆ ಬಂಧಿಸಲಾಗಿದೆ. ಅವರಲ್ಲಿ, ಐವರ ವಿರುದ್ಧ ಕಠಿಣ ಭಯೋತ್ಪಾದನಾ-ವಿರೋಧಿ ಕಾನೂನಿನ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಅನುಮತಿಯಿಲ್ಲದೆ ನಡೆದ ಹನುಮ ಜಯಂತಿ ಮೆರವಣಿಗೆ ವೇಳೆ ಶನಿವಾರ ಘರ್ಷಣೆ ನಡೆದಿದೆ. ಮೆರವಣಿಗೆ ಸಂಘಟಿಸಿದವರ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.