×
Ad

ದ್ವೇಷದ ಬುಲ್ಡೋಜರ್ ಆಫ್ ಮಾಡಿ‌, ವಿದ್ಯುತ್ ಘಟಕಗಳನ್ನು ಆನ್ ಮಾಡಿ: ಪ್ರಧಾನಿಗೆ ರಾಹುಲ್ ಆಗ್ರಹ

Update: 2022-04-20 18:26 IST

ಹೊಸದಿಲ್ಲಿ: ದಿಲ್ಲಿ ಮತ್ತು ಮಧ್ಯಪ್ರದೇಶದ ಹಿಂಸಾಪೀಡಿತ ಪ್ರದೇಶಗಳಲ್ಲಿ ಬುಲ್‍ಡೋಜರ್‍ಗಳ ಬಳಕೆ ಕುರಿತಂತೆ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ʼದ್ವೇಷದ ಬುಲ್‍ಡೋಜರ್‍ಗಳನ್ನುʼ ಸ್ವಿಚ್ ಆಫ್ ಮಾಡಿ ʼವಿದ್ಯುತ್ ಘಟಕಗಳʼ ಸ್ವಿಚ್ ಅನ್ನು ಆನ್ ಮಾಡುವಂತೆ ಅವರು ಪ್ರಧಾನಿಯನ್ನು ಆಗ್ರಹಿಸಿದ್ದಾರೆ.

ದೇಶದಲ್ಲಿ ಕಲ್ಲಿದ್ದಲು ಕೊರತೆ ಕುರಿತಂತೆಯೂ ಉಲ್ಲೇಖಿಸಿದ  ರಾಹುಲ್ ಗಾಂಧಿ "ಎಂಟು ವರ್ಷಗಳ ದೊಡ್ಡ ಮಾತುಗಳು ಭಾರತದಲ್ಲಿ ಕೇವಲ 8 ದಿನಗಳ ಕಲ್ಲಿದ್ದಲು ಸಂಗ್ರಹ ಉಳಿಯುವಂತಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

"ದೇಶದಲ್ಲಿ ಹಣದುಬ್ಬರ ಏರುತ್ತಿದೆ, ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ, ವಿದ್ಯುತ್ ಕಡಿತವು ಸಣ್ಣ ಕೈಗಾರಿಕೆಗಳನ್ನು ಕಷ್ಟದಲ್ಲಿ ದೂಡಲಿವೆ ಇದು  ಉದ್ಯೋಗ ನಷ್ಟಕ್ಕೂ ಕಾರಣವಾಗಲಿದೆ, ದ್ವೇಷದ ಬುಲ್ ಡೋಜರ್‍ಗಳನ್ನು ಆಫ್ ಮಾಡಿ ವಿದ್ಯುತ್ ಘಟಕಗಳನ್ನು ಆನ್ ಮಾಡಿ" ಎಂದು ರಾಹುಲ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News