ಭಾರತದಿಂದ ಶ್ರೀಲಂಕಾಕ್ಕೆ ಮತ್ತೆ 7,600 ಕೋ.ರೂ. ನೆರವು
Update: 2022-04-21 00:04 IST
ಹೊಸದಿಲ್ಲಿ, ಎ. 20: ಆರ್ಥಿಕ ಅಧಃಪತನಗೊಂಡಿರುವ ಶ್ರೀಲಂಕಾಕ್ಕೆ ಭಾರತ 7,600 ಕೋಟಿ ರೂಪಾಯಿ ಸಾಲದ ನೆರವನ್ನು ವಿಸ್ತರಿಸಿದೆ.
ಸಾಲ ಹಾಗೂ ವಿಳಂಬ ಸಾಲ ಮರುಪಾವತಿ ಸೇರಿದಂತೆ ಭಾರತ ಜನವರಿಯಲ್ಲಿ ಶ್ರೀಲಂಕಾಕ್ಕೆ 10,661 ಕೋಟಿ ರೂಪಾಯಿ ನೆರವು ನೀಡಿತ್ತು. ಬಾಂಗ್ಲಾದೇಶ ಕೂಡ 3,433 ಕೋಟಿ ರೂಪಾಯಿ ಸಾಲ ಮರುಪಾವತಿಯನ್ನು ಮುಂದೂಡಲು ಬಯಸಿದೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವರು ಬುಧವಾರ ತಿಳಿಸಿದ್ದಾರೆ.