ಚಲಿಸುತ್ತಿದ್ದ ಬೈಕಿನಿಂದ ಬಿದ್ದು ಮಹಿಳೆ ಮೃತ್ಯು
Update: 2022-04-21 21:35 IST
ಮಲ್ಪೆ : ರಸ್ತೆಯ ಮಧ್ಯದಲ್ಲಿದ್ದ ಹಂಪ್ಸ್‌ನಲ್ಲಿ ಒಮೆಲೇ ಬ್ರೇಕ್ ಹಾಕಿದ ಪರಿಣಾಮ ಬೈಕ್‌ನಲ್ಲಿ ಸಹಸವಾರರಾಗಿದ್ದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ತಲೆಗಾದ ಗಂಭೀರ ಗಾಯದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕೆಮ್ಮಣ್ಣು ಚರ್ಚ್ ಎದುರು ಬುಧವಾರ ಮುಂಜಾನೆ ನಡೆದಿದೆ.
ಮೃತರನ್ನು ಕೊಡವೂರಿನ ಗಂಗಾ ಎಂದು ಗುರುತಿಸಲಾಗಿದೆ. ಇವರು ನಿನ್ನೆ ಬೆಳಗ್ಗೆ ಮೂಲಸ್ಥಾನ ಬೇಂಗ್ರೆ ಹೂಡೆಗೆ ಹೋಗಲು ಮಗ ಆಕರ್ಷ್‌ನ ಮೋಟಾರು ಬೈಕ್‌ನಲ್ಲಿ ತೆರಳುತಿದ್ದಾಗ ಬೆಳಗ್ಗೆ ಕೆಮ್ಮಣ್ಣು ಚರ್ಚ್ ಎದುರು ಘಟನೆ ನಡೆದಿದೆ.
ಹಂಪ್ಸ್ ಎದುರು ಆಕರ್ಷ್ ಒಮ್ಮೆಗೇ ಬ್ರೇಕ್ ಹಾಕಿದ್ದರಿಂದ ಗಂಗಾ ರಸ್ತೆಗೆ ಬಿದ್ದರು. ಅವರನ್ನು ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.