×
Ad

ಜಿಂದಾಲ್ ಕಚೇರಿಗೆ ಇಡಿ ದಾಳಿ

Update: 2022-04-21 22:51 IST

ಹೊಸದಿಲ್ಲಿ, ಎ. 21: ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಶಂಕೆಯಲ್ಲಿ ಹೊಸದಿಲ್ಲಿಯಲ್ಲಿರುವ ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ (ಜೆಎಸ್ಪಿಎಲ್)ನ ಕಚೇರಿಗಳಿಗೆ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ. 

ಹೊಸದಿಲ್ಲಿಯ ಮುಖ್ಯ ವಿಮಾನ ನಿಲ್ದಾಣದ ಸಮೀಪದ ಸೆಟಲೈಟ್ ಪಟ್ಟಣ ಗುರ್ಗಾಂವ್ ನಲ್ಲಿ ಕೂಡ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಈ ದಾಳಿಯ ಬಗ್ಗೆ ಜಿಂದಾಲ್ ಕಂಪೆನಿ ತತ್ಕ್ಷಣಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ‘‘ಶೋಧ ಕಾರ್ಯಾಚರಣೆ ಬೆಳಗ್ಗೆ ಆರಂಭವಾಗಿತ್ತು. ಇದು ಹಳೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿರಬಹುದು” ಎಂದು ಮೂಲಗಳು ತಿಳಿಸಿವೆ. 

ಜೆಎಸ್ಪಿಎಲ್ 2021ರಲ್ಲಿ ಭಾರತದ ಐದನೇ ಅತಿ ದೊಡ್ಡ ಕಚ್ಚಾ ಉಕ್ಕು ಉತ್ಪಾದನಾ ಕಂಪೆನಿಯಾಗಿತ್ತು. ಇದು ಟಾಟಾ ಸ್ಟೀಲ್, ಜೆಎಸ್ಡಬ್ಲು ಸ್ಟೀಲ್, ರಾಷ್ಟ್ರ ಸ್ವಾಮಿತ್ವದ ಎಸ್ಎಐಎಲ್ ಹಾಗೂ ಆರ್ಸೆಲೋರ್ ಮಿತ್ತಲ್ ನಿಪ್ಪೋನ್ ಸ್ಟೀಲ್ ಇಂಡಿಯಾ (ಎಎಂಎನ್ಎಸ್ ಇಂಡಿಯಾ) ದೊಂದಿಗೆ ಸ್ಪರ್ಧಿಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News