×
Ad

ಇರ್ಫಾನ್ ಪಠಾಣ್, ಅಮಿತ್ ಮಿಶ್ರಾ ಟ್ವೀಟ್ ವಾರ್

Update: 2022-04-23 20:04 IST

ಹೊಸದಿಲ್ಲಿ: ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್(Irfan Pathan) ಹಾಗೂ ಅಮಿತ್ ಮಿಶ್ರಾ(Amit Mishra) ಅವರ ನಡುವೆ ನಡೆಯುತ್ತಿರುವ ಟ್ವಿಟರ್ ಸಮರದ ಭಾಗವಾಗಿ ಇರ್ಫಾನ್ ಅವರು ಭಾರತದ ಸಂವಿಧಾನದ ಮುನ್ನುಡಿಯ ಇಮೇಜ್ ಅನ್ನು ಟ್ವೀಟ್ ಮಾಡಿ "ಯಾವತ್ತೂ ಇದನ್ನು ಅನುಸರಿಸಿದ್ದೇನೆ, ಈ ಸುಂದರ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಇದನ್ನು ಅನುಸರಿಸಲು ಹೇಳುತ್ತೇನೆ, ದಯವಿಟ್ಟು ಓದಿ, ಓದಿ...'' ಎಂದು ಬರೆದಿದ್ದಾರೆ.

ಇದಕ್ಕೂ ಮುಂಚೆ ಟ್ವೀಟ್ ಮಾಡಿದ್ದ ಇರ್ಫಾನ್ "ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಅತ್ಯಂತ ಮಹಾನ್ ದೇಶವಾಗುವ ಸಾಮರ್ಥ್ಯ ಹೊಂದಿದೆ, ಆದರೆ,'' ಎಂದು ಬರೆದಿದ್ದರು.

ಈ ಟ್ವೀಟ್ ಅನ್ನು ಪೂರ್ಣಗೊಳಿಸಿದ ಅಮಿತ್ ಮಿಶ್ರಾ "ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಅತ್ಯಂತ ಮಹಾನ್ ದೇಶವಾಗುವ ಸಾಮರ್ಥ್ಯ ಹೊಂದಿದೆ, ಆದರೆ, ಅನುಸರಿಸಬೇಕಾದ ಮೊದಲ ಪುಸ್ತಕ ನಮ್ಮ ಸಂವಿಧಾನ ಎಂದು ಕೆಲ ಜನ ಅರ್ಥ ಮಾಡಿಕೊಂಡರೆ,'' ಎಂದು ಬರೆದಿದ್ದರು.

ಇಬ್ಬರೂ ತಮ್ಮ ಟ್ವೀಟ್‌ಗಳ ಹಿಂದಿನ ಮರ್ಮವೇನೆಂದು ಹೇಳದೇ ಇದ್ದರೂ ಇತ್ತೀಚೆಗೆ ದಿಲ್ಲಿಯ ಜಹಾಂಗೀರ್‌ಪುರಿ ಮತ್ತು ಇತರ ಕಡೆಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿ ಮಾಡಿರುವ ಕುರಿತಂತೆ ಅವರು ಪ್ರತಿಕ್ರಿಯಿಸಿರಬಹುದೆಂದು ಸಾಮಾಜಿಕ ಜಾಲತಾಣಿಗರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News