ಹೊಟೇಲ್ ರೂಮಿನಲ್ಲಿ ನೌಕರ ಆತ್ಮಹತ್ಯೆ
Update: 2022-04-26 21:38 IST
ಬ್ರಹ್ಮಾವರ : ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಚ್ಚೂರು ಗ್ರಾಮದ ಕಳುವಿನ ಬಾಗಿಲು ನಿವಾಸಿ ಭಾಸ್ಕರ ಪೂಜಾರಿ (34) ಎಂಬವರು ಜೀವನದಲ್ಲಿ ಜೀಗುಪ್ಸೆಗೊಂಡು ಎ.26ರಂದು ಬೆಳಗ್ಗೆ ತಾನು ರೂಮ್ ಬಾಯ್ ಆಗಿ ಕೆಲಸ ಮಾಡುವ ಬ್ರಹ್ಮಾವರದ ಆಶ್ರಯ ಹೊಟೇಲ್ ರೂಮ್‌ನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.