ಚೀನಾದಲ್ಲಿ 4 ವರ್ಷದ ಬಾಲಕನಿಗೆ ಹಕ್ಕಿ ಜ್ವರ ದೃಢ; ಮನುಷ್ಯರಿಗೆ ಹರಡಿದ ಮೊದಲ ಪ್ರಕರಣ

Update: 2022-04-27 05:27 GMT
ಸಾಂದರ್ಭಿಕ ಚಿತ್ರ

ಬೀಜಿಂಗ್: ಚೀನಾದಲ್ಲಿ ಹಕ್ಕಿ ಜ್ವರ (ಏವಿಯನ್‌ ಫ್ಲೂ) ಎಚ್‌3ಎನ್‌8 ಮನುಷ್ಯರಿಗೆ ಹರಡಿದ ಮೊದಲ ಪ್ರಕರಣ ದೃಢಗೊಂಡಿದೆ. ಆದರೆ ಈ ಸೋಂಕು ಜನರಲ್ಲಿ ವ್ಯಾಪಕವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಮಧ್ಯ ಹೇನನ್‌ ಪ್ರಾಂತ್ಯದ ನಿವಾಸಿಯಾಗಿರುವ ನಾಲ್ಕು ವರ್ಷದ ಬಾಲಕನೊಬ್ಬನಿಗೆ ಈ ಸೋಂಕು ದೃಢಪಟ್ಟಿದೆ. ಬಾಲಕನನ್ನು ಕೆಲ ದಿನಗಳ ಹಿಂದೆ ಜ್ವರ ಮತ್ತಿತರ ಗುಣಲಕ್ಷಣಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಾಲಕನ ಮನೆಯಲ್ಲಿ ಕೋಳಿ ಸಾಕಣೆ ನಡೆಸಲಾಗುತ್ತಿದೆ ಹಾಗೂ ಆತ ವಾಸಿಸುವ ಪ್ರದೇಶದಲ್ಲಿ ಬಾತುಕೋಳಿಗಳು ಸಾಕಷ್ಟು ಸಂಖ್ಯೆಯಲ್ಲಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಬಾಲಕನಿಗೆ ಕೋಳಿಗಳಿಂದಲೇ ಸೋಂಕು ಹರಡಿದೆ ಆದರೆ ಇದು ಮನುಷ್ಯರಲ್ಲಿ ವ್ಯಾಪಿಸುವ ಸಾಧ್ಯತೆ ಕಡಿಮೆ ಹಾಗೂ ಬಾಲಕನ ಹತ್ತಿರದ ಸಂಪರ್ಕಗಳಲ್ಲಿ ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಲಾಗಿದೆ.

ಆದರೂ ಸತ್ತ ಅಥವಾ ಅಸೌಖ್ಯಪೀಡಿತ ಕೋಳಿಗಳಿಂದ ದೂರವುಳಿಯುವಂತೆ ಆರೋಗ್ಯ ಆಯೋಗ ನಾಗರಿಕರಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News