ದಿಲ್ಲಿಯ ಮುಹಮ್ಮದ್‌ ಪುರ್‌ ಅನ್ನು ಮಾಧವಪುರಂ ಎಂದು ಮರುನಾಮಕರಣ ಮಾಡಿದ ಬಿಜೆಪಿ ಕೌನ್ಸಿಲರ್

Update: 2022-04-27 12:04 GMT
Photo: Indianexpress

ಹೊಸದಿಲ್ಲಿ: ದಕ್ಷಿಣ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಷನ್‌ ವ್ಯಾಪ್ತಿಯ ಮೊಹಮ್ಮದ್‌ಪುರ್‌ ಗ್ರಾಮವನ್ನು ಮಾಧವಪುರಂ ಎಂದು ಮರುಹೆಸರಿಸಿ ಹೊಸ ಹೆಸರಿನ ಫಲಕವನ್ನು  ಸ್ಥಳೀಯ ಬಿಜೆಪಿ ಕೌನ್ಸಿಲರ್‌ ಭಗತ್‌ ಸಿಂಗ್‌ ಟೋಕಸ್‌ ಇಂದು ಅನಾವರಣಗೊಳಿಸಿದ್ದಾರೆ. ಈ ಸಂದರ್ಭ ದಿಲ್ಲಿ ಬಿಜೆಪಿ ಅಧ್ಯಕ್ಷ ಅದೇಶ್‌ ಗುಪ್ತಾ ಹಾಗೂ ಕೆಲ ಸ್ಥಳೀಯರು ಉಪಸ್ಥಿತರಿದ್ದರು.

ʻʻಮುನಿಸಿಪಲ್‌ ಕಾರ್ಪೊರೇಷನ್‌ ಸಭೆಯಲ್ಲಿ ಹೆಸರು  ಬದಲಾವಣೆಗೆ ಅನುಮತಿ ದೊರೆತ ನಂತರ ಇಂದು ಹೆಸರು ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ ಇಂದಿನಿಂದ ಈ ಸ್ಥಳ ಮುಹಮ್ಮದ್‌ಪುರ್‌ ಬದಲು ಮಾಧವಪುರಂ ಎಂದು ಕರೆಯಲ್ಪಡುವುದು,ʼʼಎಂದಿದ್ದಾರೆ.

ʻʻಸ್ವಾತಂತ್ರ್ಯ ದೊರೆತು 75 ವರ್ಷಗಳ ನಂತರ ಗುಲಾಮಗಿರಿಯ ಯಾವುದೇ ಚಿಹ್ನೆ ಉಳಿಯಬಾರದು. ದಿಲ್ಲಿಯ ಯಾವುದೇ ನಿವಾಸಿಗೆ ಇದು ಬೇಕಿಲ್ಲ,ʼʼಎಂದು ಅವರು ಹೇಳಿದರು.

ಆದರೆ ಹೆಸರು ಬದಲಾಯಿಸುವ ಅಧಿಕಾರ ದಿಲ್ಲಿ ಸರಕಾರಕ್ಕಿರುವುದನ್ನು ಅವರಿಗೆ ತಿಳಿಸಿದಾಗ ನಮ್ಮ ಕಡೆಯಿಂದ ನಾವು ಮಾಡಿದ್ದೇವೆ, ಹೆಸರು ಬದಲಾವಣೆ ಅದಕ್ಕೆ ಬೇಕೇ, ಬೇಡವೇ ಎಂಬುದನ್ನು ದಿಲ್ಲಿ ಸರಕಾರ ಹೇಳಬೇಕು, ಎಂದು ತಿಳಿಸಿದರು.

ಹೆಸರು ಬದಲಾವಣೆ ಪ್ರಸ್ತಾವನೆಯನ್ನು ಬಿಜೆಪಿ ಕೌನ್ಸಿಲರ್‌ ಭಗತ್‌ ಸಿಂಗ್‌ ಟೋಕಸ್‌ ಅವರೇ ಮಾಡಿದ್ದರಲ್ಲದೆ ಮುಘಲರ ಕಾಲದಲ್ಲಿ ಪ್ರತಿ ಗ್ರಾಮದ ಹೆಸರನ್ನು ಬಲವಂತವಾಗಿ ಬದಲಾಯಿಸಲಾಗಿತ್ತು, ಮೊಹಮ್ಮದ್‌ಪುರ್‌ ಗ್ರಾಮದ ಜನರಿಗೆ ಹೆಸರು ಬದಲಾವಣೆ ಬೇಕಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News