×
Ad

​ಉಡುಪಿ: 15 ದಿನಗಳಲ್ಲಿ ಎರಡನೇ ಮಹಿಳೆಯಲ್ಲಿ ಸೋಂಕು ಪತ್ತೆ

Update: 2022-04-28 21:32 IST

ಉಡುಪಿ : ಕಳೆದ 15 ದಿನಗಳಲ್ಲಿ ಗುರುವಾರ ಜಿಲ್ಲೆಯ ಎರಡನೇ ವ್ಯಕ್ತಿಯಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಕಳೆದ ಎ.20ರಂದು ಮಹಿಳೆಯೊಬ್ಬರಲ್ಲಿ ಸೋಂಕು ಕಂಡುಬಂದ ಬಳಿಕ ಇಂದು ಮತ್ತೊಬ್ಬ ಮಹಿಳೆ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ.

ಎ.20ರಂದು ಪಾಸಿಟಿವ್ ಬಂದ ಮಹಿಳೆ ಇಂದು ಸಂಪೂರ್ಣ ಗುಣಮುಖರಾದರೆ, ಇಂದು ಪಾಸಿಟಿವ್ ಬಂದ ಉಡುಪಿಯ ಮಹಿಳೆಯನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಎ.12ರಂದು ಜಿಲ್ಲೆ ಕೋವಿಡ್ ಮುಕ್ತವಾದ ಬಳಿಕ ಸೋಂಕು ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ.  

ಇಂದು ಒಟ್ಟು 103 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಉಡುಪಿ ತಾಲೂಕಿನಲ್ಲಿ ಪರೀಕ್ಷೆಗೊಳಗಾದ 68 ಮಂದಿಯಲ್ಲಿ ಮಹಿಳೆಯೊಬ್ಬರು ಪಾಸಿಟಿವ್ ಬಂದರೆ, ಕುಂದಾಪುರ ತಾಲೂಕಿನ ೨೦ ಹಾಗೂ ಕಾರ್ಕಳ ತಾಲೂಕಿನ ೧೫ ಮಂದಿಯಲ್ಲಿ ಸೋಂಕು ಪತ್ತೆಯಾಗಲಿಲ್ಲ. 

೫೬೨ ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು ೫೬೨ ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ ೩೬ ಮಂದಿ ಮೊದಲ ಡೋಸ್, ೩೧೮ ಮಂದಿ ಎರಡನೇ ಡೋಸ್ ಹಾಗೂ ೨೦೮ ಮಂದಿ ಮುನ್ನೆಚ್ಚರಿಕೆ ಡೋಸ್‌ನ್ನು ಪಡೆದಿದ್ದಾರೆ.

೧೨ರಿಂದ ೧೪ ವರ್ಷ ಪ್ರಾಯದ ೩೧ ಮಕ್ಕಳಿಗೆ ಇಂದು ಮೊದಲ ಡೋಸ್‌ನ್ನು ನೀಡಿದ್ದು ಈವರೆಗೆ ಒಟ್ಟು ೩೦,೨೭೧ ಮಂದಿಗೆ ಲಸಿಕೆಯನ್ನು ನೀಡಿದಂತಾಗಿದೆ. ಅಲ್ಲದೇ ೨೭೨ ಮಂದಿ ಎರಡನೇ ಡೋಸ್ ಪಡೆದಿದ್ದು ೬೯೪೭ ಮಂದಿ ಈ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ೧೫ರಿಂದ ೧೮ ವರ್ಷದೊಳಗಿನ ೪೮,೯೪೩ ಮಂದಿ ಮೊದಲ ಡೋಸ್ ಹಾಗೂ ೪೬,೯೯೪ ಮಂದಿ ಎರಡನೇ ಡೋಸ್ ಪಡೆದಿದ್ದಾರೆ.

೬೦ ವರ್ಷ ಮೇಲಿನ ಒಟ್ಟು ೪೮,೨೪೩ ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದು, ಎಲ್ಲರೂ ಸೇರಿ ಒಟ್ಟು ೬೫,೭೪೬ ಮಂದಿ ಇಂದಿನವರೆಗೆ ಈ ಲಸಿಕೆ ಯನ್ನು ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News