ಕೇಂದ್ರ ಸರಕಾರದ ಅವಧಿಯಲ್ಲಿ ಪೆಟ್ರೋಲ್,ಡೀಸೆಲ್ ಮೇಲಿನ ತೆರಿಗೆ ಶೇ.250ರಷ್ಟು ಏರಿಕೆ: ಪ್ರಿಯಾಂಕಾ ಗಾಂಧಿ

Update: 2022-04-29 16:14 GMT

ಹೊಸದಿಲ್ಲಿ,ಎ.29: ಹೆಚ್ಚುತ್ತಿರುವ ಇಂಧನ ಬೆಲೆಗಳ ಕುರಿತು ಶುಕ್ರವಾರ ಸರಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಕೇಂದ್ರವು 2014-15 ಮತ್ತು 2020-21ರ ನಡುವಿನ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳನ್ನು ಶೇ.250ರಷ್ಟು ಹೆಚ್ಚಿಸಿದೆ ಎಂದು ಟ್ವೀಟಿಸಿದ್ದಾರೆ.

ಕೆಲವು ಪ್ರತಿಪಕ್ಷ ಆಡಳಿತದ ರಾಜ್ಯಗಳಲ್ಲಿ ಇಂಧನ ಬೆಲೆಗಳು ಹೆಚ್ಚಿನ ಮಟ್ಟದಲ್ಲಿವೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ಕುರಿತು ರಾಜಕೀಯ ಕೆಸರೆರಚಾಟದ ನಡುವೆಯೇ ಪ್ರಿಯಾಂಕಾರ ಹೇಳಿಕೆ ಹೊರಬಿದ್ದಿದೆ.ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಕಡಿತಗಳ ವಿಷಯದಲ್ಲಿ ಪ್ರತಿಪಕ್ಷಗಳ ಮುಖ್ಯಮಂತ್ರಿಗಳು ಪ್ರಧಾನಿ ವಿರುದ್ಧ ದಾಳಿ ನಡೆಸುತ್ತಿದ್ದಾರೆ.2014ರಲ್ಲಿ ಪೆಟ್ರೋಲ್ ಮೇಲೆ ಕೇವಲ 9.48 ರೂ. ಮತ್ತು ಡೀಸೆಲ್ ಮೇಲೆ ಕೇವಲ 3.56 ರೂ.ಅಬಕಾರಿ ಸುಂಕವನ್ನುವಿಧಿಸಲಾಗಿತ್ತು ಎಂದು ಟ್ವೀಟ್ನಲ್ಲಿ ತಿಳಿಸಿರುವ ಪ್ರಿಯಾಂಕಾ,ಕೇಂದ್ರ ಸರಕಾರವು ಆರು ವರ್ಷಗಳಲ್ಲಿ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಶೇ.250ರಷ್ಟು ಹೆಚ್ಚಿಸಿದೆ ಎಂಬ ಮಾಧ್ಯಮ ವರದಿಯನ್ನೂ ಟ್ಯಾಗ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News