ಅರ್ಥಹೀನ ವಿಷಯದ ಬಗ್ಗೆ ಮಾತು ಬೇಡ ಎಂದು ಧ್ವನಿವರ್ಧಕ ವಿವಾದವನ್ನು ತಳ್ಳಿಹಾಕಿದ ಬಿಹಾರ ಸಿಎಂ ನಿತೀಶ್ ಕುಮಾರ್‌

Update: 2022-04-30 18:32 GMT
PTI

ಪೂರ್ನಿಯಾ (ಬಿಹಾರ),ಎ.30: ಆರಾಧನಾ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತು ವಿವಾದವನ್ನು ಶನಿವಾರ ತಳ್ಳಿಹಾಕಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ತನ್ನ ಸರಕಾರವು ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.

ಇಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಈ ಅರ್ಥಹೀನ ವಿಷಯದ ಬಗ್ಗೆ ಮಾತನಾಡುವುದು ಬೇಡ. ಬಿಹಾರದಲ್ಲಿ ಯಾವುದೇ ರೀತಿಯ ಧಾರ್ಮಿಕ ಆಚರಣೆಗಳಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಾಯಶಃ ಕೆಲವರಿಗೆ ಇಂತಹ ವಿಷಯಗಳ ಬಗ್ಗೆ ವಿವಾದ ಸೃಷ್ಟಿಸುವುದು ಮತ್ತು ಅದನ್ನು ಜೀವಂತವಿರಿಸುವುದು ದಂಧೆಯಾಗಿದೆ ’ ಎಂದರು.

ಅತ್ಯಂತ ಹೆಚ್ಚಿನ ಶಬ್ದದಿಂದ ಆರೋಗ್ಯ ಸಮಸ್ಯೆಗಳ ಕಾರಣ ನೀಡಿ ಇತ್ತೀಚಿಗೆ ಆರಾಧನಾ ಸ್ಥಳಗಳಿಂದ ಸಾವಿರಾರು ಧ್ವನಿವರ್ಧಕಗಳನ್ನು ತೆಗೆದುಹಾಕಿರುವ ನೆರೆಯ ಉತ್ತರ ಪ್ರದೇಶದ ’ಯೋಗಿ ಮಾದರಿ’ಯನ್ನು ಅನುಸರಿಸುವಂತೆ ರಾಜ್ಯದ ಬಿಜೆಪಿ ನಾಯಕರ ಒತ್ತಾಯದ ಬೆನ್ನಲ್ಲೇ ನಿತೀಶರ ಈ ಹೇಳಿಕೆ ಹೊರಬಿದ್ದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News