ವಾಯುವ್ಯ ಮತ್ತು ಮಧ್ಯಭಾರತದಲ್ಲಿ 122 ವರ್ಷಗಳಲ್ಲಿಯೇ ಬಿರುಬೇಸಿಗೆಯ ಎಪ್ರಿಲ್

Update: 2022-04-30 18:37 GMT
PHOTO:TWITTER/@reuterspictures

ಹೊಸದಿಲ್ಲಿ,ಎ.30: ವಾಯುವ್ಯ ಮತ್ತು ಮಧ್ಯ ಭಾರತ 122 ವರ್ಷಗಳಲ್ಲಿಯೇ ಅತ್ಯಂತ ತೀವ್ರ ಬಿಸಿಲಿನ ಎಪ್ರಿಲ್ ತಿಂಗಳಿಗೆ ಸಾಕ್ಷಿಯಾಗಿದ್ದು,ಸರಾಸರಿ ಗರಿಷ್ಠ ತಾಪಮಾನಗಳು ಅನುಕ್ರಮವಾಗಿ 35.9 ಮತ್ತು 37.78 ಡಿ.ಸೆ.ಗೆ ತಲುಪಿದ್ದವು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಶನಿವಾರ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಡಿ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರಾ ಅವರು,ದೇಶದ ವಾಯುವ್ಯ ಮತ್ತು ಪಶ್ಚಿಮ ಮಧ್ಯ ಭಾಗಗಳಾಗಿರುವ ಗುಜರಾತ,ರಾಜಸ್ಥಾನ,ಪಂಜಾಬ ಮತ್ತು ಹರ್ಯಾಣಗಳಲ್ಲಿ ಮೇ ತಿಂಗಳಿನಲ್ಲಿಯೂ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮುಂದುವರಿಯಲಿದೆ. ದ.ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಮೇ ತಿಂಗಳಿನಲ್ಲಿ ರಾತ್ರಿಗಳು ಹೆಚ್ಚಿನ ಬಿಸಿಯಿಂದ ಕೂಡಿರಲಿವೆ ಎಂದು ತಿಳಿಸಿದರು.

ವಾಯುವ್ಯ ಭಾರತದಲ್ಲಿ ಮಾರ್ಚ್ನಲ್ಲಿ ಶೇ.89ರಷ್ಟು ಮತ್ತು ಎಪ್ರಿಲ್ನಲ್ಲಿ ಶೇ.83ರಷ್ಟು ಮಳೆ ಕೊರತೆಯಾಗಿದೆ ಎಂದರು. ಕಳೆದ ಕೆಲವು ವಾರಗಳಿಂದ,ವಿಶೇಷವಾಗಿ ದೇಶದ ವಾಯುವ್ಯ ಮತ್ತು ಪಶ್ಚಿಮ ಭಾಗಗಳು ತೀವ್ರ ಬಿಸಿಲಿನಿಂದ ತತ್ತರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News