ವಾಣಿಜ್ಯ ಬಳಕೆಯ ಎಲ್ ಪಿಜಿ ಬೆಲೆ 102.50 ರೂ. ಹೆಚ್ಚಳ
ಹೊಸದಿಲ್ಲಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ರವಿವಾರ 102.50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ 2, 253 ರೂ.ಗಳಷ್ಟಿದ್ದ ಸಿಲಿಂಡರ್ ಈಗ 2,355.50 ರೂ.ಗೆ ಏರಿಕೆಯಾಗಿದೆ ಎಂದು India Today ವರದಿ ಮಾಡಿದೆ.
ಅಲ್ಲದೆ, 5 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 655 ರೂ. ಆಗಿದೆ.
ಇದಕ್ಕೂ ಮುನ್ನ ಎಪ್ರಿಲ್ 1 ರಂದು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿಯ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 250 ರೂ. ಹೆಚ್ಚಿಸಿದ ಪರಿಣಾಮ 2,253 ರೂ.ಗೆ ತಲುಪಿತ್ತು. ಮಾರ್ಚ್ 1 ರಂದು, ವಾಣಿಜ್ಯ ಎಲ್ಪಿಜಿ ಬೆಲೆಯನ್ನು 105 ರೂ. ಹೆಚ್ಚಿಸಲಾಗಿತ್ತು.
ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 2,355.50 ರೂ. ಏರಿಕೆಯಾಗಿದೆ. ಮುಂಬೈನಲ್ಲಿ ವಾಣಿಜ್ಯ ಎಲ್ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 2,205 ರೂ. ನಿಂದ 2,307 ರೂ.ಗೆ ಏರಿಸಲಾಗಿದೆ. ಕೋಲ್ಕತ್ತಾದಲ್ಲಿ ಗ್ರಾಹಕರು 19 ಕೆಜಿ ಸಿಲಿಂಡರ್‌ಗೆ 2,351 ರೂ ಬದಲಿಗೆ 2,455 ರೂಗಳನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಚೆನ್ನೈನಲ್ಲಿರುವ ಗ್ರಾಹಕರು ಇಂದಿನಿಂದ ರೂ 2,406 ಬದಲಿಗೆ ರೂ 2,508 ಪಾವತಿಸಬೇಕಾಗುತ್ತದೆ.