ಶಿಕ್ಷಣ ಮಾಫಿಯಾ ಮೇಲೆ 'ಬುಲ್ಡೋಜರ್' ಹರಿಸಿ: ಪೋಷಕರ ಹಕ್ಕೊತ್ತಾಯ

Update: 2022-05-02 02:27 GMT
ಸಾಂದರ್ಭಿಕ ಚಿತ್ರ

ನೋಯ್ಡಾ: ರಾಜ್ಯದಲ್ಲಿ ಖಾಸಗಿ ಶಾಲೆಗಳು ಶುಲ್ಕ ಏರಿಸಿರುವ ಬಗ್ಗೆ ಪೋಷಕರು ವ್ಯಾಪಕ ಪ್ರತಿಭಟನೆ ಆರಂಭಿ ಸಿದ್ದು, ಶಿಕ್ಷಣ ಮಾಫಿಯಾವನ್ನು ಧ್ವಂಸಗೊಳಿಸಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಶಾಲೆಗಳು ಮಕ್ಕಳ ಸಾರಿಗೆಗೆ ದುಬಾರಿ ವೆಚ್ಚ ವಸೂಲಿ ಮಾಡುವ ಜತೆಗೆ ಸುಲಭವಾಗಿ ಕೈಗೆಟುವ ಎನ್‍ಸಿಇಆರ್ ಟಿ ಪುಸ್ತಕಗಳ ಬದಲು, ಖಾಸಗಿ ಪ್ರಕಾಶಕರ ದುಬಾರಿ ಪುಸ್ತಕಗಳನ್ನು ನಿಗದಿಪಡಿಸಲಾಗುತ್ತಿದೆ ಎನ್ನುವುದು ಪೋಷಕರ ಆರೋಪ. ನೋಯ್ಡಾ ಬಡಾವಣೆಯಲ್ಲಿ ಜಮಾಯಿಸಿದ ಪೋಷಕರು ಶಿಕ್ಷಣ ಮಾಫಿಯಾ ಮೇಲೆ 'ಬುಲ್ಡೋಜರ್' ಹರಿಸಿ ಎಂದು ಪ್ರತಿಭಟನೆ ನಡೆಸಿದರು.

ಎಸಿಆರ್ ಗಾರ್ಡಿಯನ್ಸ್ ಅಸೋಸಿಯೇಶನ್ ಮತ್ತು ನೋಯ್ಡಾ ಬಡಾವಣೆ ಫ್ಲ್ಯಾಟ್ ಮಾಲಕರ ಕಲ್ಯಾಣ ಸಂಘ ಬ್ಯಾನರ್‌ ನಲ್ಲಿ ಎ.17ರಂದೂ ಇಂಥದ್ದೇ ಪ್ರತಿಭಟನೆ ನಡೆಸಲಾಗಿತ್ತು. ರಸ್ತೆಬದಿಯಲ್ಲಿ ಸಾಂಕೇತಿಕವಾಗಿ ಬೂಟ್ ಪಾಲೀಶ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಲು ಅನುಮತಿ ನೀಡಿರುವ ಸರ್ಕಾರದ ಕ್ರಮವನ್ನು ಪೋಷಕರು ತೀವ್ರವಾಗಿ ವಿರೋಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News