×
Ad

ಕುಮುಟಾದಲ್ಲಿ ಚಂದ್ರದರ್ಶನದ ಹಿನ್ನೆಲೆ; ಉಡುಪಿಯ ಕೆಲವೆಡೆ ಈದುಲ್ ಫಿತ್ರ್ ಆಚರಣೆ

Update: 2022-05-02 09:15 IST

ಉಡುಪಿ : ಕುಮುಟಾದಲ್ಲಿ ಚಂದ್ರದರ್ಶನ ಆಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕೆಲವೆಡೆ ಈದುಲ್ ಫಿತ್ರ್ ಸಂಭ್ರಮದಿಂದ ಆಚರಿಸಲಾಯಿತು.

ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನ ಅಬ್ದುರ‌್ರಶೀದ್ ನದ್ವಿ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿಸಲಾಯಿತು. ಅದೇ ರೀತಿ ಮಲ್ಪೆ ಅಬೂಬಕ್ಕರ್ ಸಿದ್ದೀಕ್ ಮಸೀದಿ, ಹೂಡೆ, ಕಂಡ್ಲೂರು, ಶಿರೂರು ಸೇರಿದಂತೆ ಕೆಲವು ಮಸೀದಿಗಳಲ್ಲಿ ಆಯಾ ಜಮಾಅತ್‌ನಲ್ಲಿ ಈದ್ ನಮಾಝ್ ನಿರ್ವಹಿಸಿದರು.

ಗಂಗೊಳ್ಳಿ ಕೇಂದ್ರ ಜುಮಾ ಮಸೀದಿ, ಮೊಹಿಯುದ್ದೀನ್ ಜುಮಾ ಮಸೀದಿ, ಶಾಹಿ ಜುಮ್ಮಾ ಮಸೀದಿ, ಮಸ್ಜೀದೆ ಅಹ್ಲೇ ಹದೀಸ್‌ಗಳಲ್ಲಿ ಹಬ್ಬದ ವಿಶೇಷ ನಮಾಝ್ ನಿರ್ವಹಿಸಲಾಯಿತು.

ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News