ಟ್ವಿಟರ್ ಇನ್ನು ಉಚಿತವಲ್ಲ; ಸುಳಿವು ನೀಡಿದ ಎಲಾನ್ ಮಸ್ಕ್

Update: 2022-05-04 01:48 GMT
ಎಲಾನ್ ಮಸ್ಕ್

ನ್ಯೂಯಾರ್ಕ್: ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೀಡಿದ್ದಾರೆ.

ಟ್ವಿಟರ್ ಮಂದಿನ ದಿನಗಳಲ್ಲಿ ಪೇವಾಲ್ ಸಾಮಾಜಿಕ ಜಾಲತಾಣದ ಸ್ವರೂಪ ಪಡೆಯಲಿದೆ ಎಂದು ಹೇಳಿದ್ದಾರೆ.
ಆದರೆ ಸಾಂದರ್ಭಿಕ ಬಳಕೆದಾರರಿಗೆ ಟ್ವಿಟ್ಟರ್ ಸದಾ ಉಚಿತವಾಗಿರುತ್ತದೆ. ವಾಣಿಜ್ಯ ಅಥವಾ ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ಶುಲ್ಕ ವಿಧಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಅಂತಿಮವಾಗಿ ಉಚಿತ ಮೇಸ್ತ್ರಿಗಳು ಯಾವ ಪ್ರತಿಫಲವೂ ಇಲ್ಲದೇ ಕಲ್ಲು ಕಡಿಯುವ ಸೇವೆ ಕೈಬಿಡಲಿದ್ದಾರೆ" ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಶುಲ್ಕ ಆಧರಿತ ಚಂದಾದಾರಿಕೆಯ ಯೋಜನೆಯೇನೂ ಹೊಸದಲ್ಲ. ಟ್ವಿಟರ್ ಬ್ಲೂ ಇಂಥದ್ದೇ ಪರಿಕಲ್ಪನೆ. ಈ ಸೇವೆಯಡಿ ಟ್ವಿಟರ್ ತನ್ನ ನಿಷ್ಠಾವಂತ ಗ್ರಾಹಕರಿಗೆ ಪ್ರಮುಖ ವಿಶೇಷತೆಗಳ ಲಭ್ಯತೆಯನ್ನು ನೀಡುತ್ತದೆ ಹಾಗೂ ಮಾಸಿಕ ಚಂದಾದಾರಿಕೆ ಶುಲ್ಕಕ್ಕೆ ಕಸ್ಟಮೈಸ್ ಮಾಡಲಾದ ಆ್ಯಪ್ ಸೇವೆ ಒದಗಿಸುತ್ತದೆ. ಟ್ವಿಟರ್ ಬ್ಲೂ, ಐಓಎಸ್, ಆಂಡ್ರಾಯ್ಡ್ ಮತ್ತು ವೆಬ್‍ನಲ್ಲಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್‍ನಲ್ಲಿ ಲಭ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News