×
Ad

ಭಾರತಕ್ಕೆ ಭೇಟಿ ನೀಡಲು ಸ್ನೇಹಿತರನ್ನು ಪ್ರೇರೇಪಿಸಿ: ಡೆನ್ಮಾರ್ಕ್‌ನಲ್ಲಿರುವ ಭಾರತೀಯರಿಗೆ ಪ್ರಧಾನಿ ಮೋದಿ ಕರೆ

Update: 2022-05-04 11:02 IST

ಕೋಪನ್ ಹ್ಯಾಗನ್: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಡೆನ್ಮಾರ್ಕ್‌ನಲ್ಲಿರುವ ಭಾರತೀಯರನ್ನು "ರಾಷ್ಟ್ರದೂತ್" (ದೇಶದ ಪ್ರತಿನಿಧಿಗಳು) ಆಗಿ ಕೆಲಸ ಮಾಡುವಂತೆ ಕೇಳಿಕೊಂಡರು ಹಾಗೂ  "ಚಲೋ ಇಂಡಿಯಾ" ಬ್ಯಾನರ್ ಅಡಿಯಲ್ಲಿ ತಮ್ಮ ಗೆಳೆಯರನ್ನು ಭಾರತಕ್ಕೆ ಆಹ್ವಾನಿಸುವಂತೆ ಒತ್ತಾಯಿಸಿದರು.

ಕೋಪನ್‌ಹೇಗನ್‌ನಲ್ಲಿ ಭಾರತೀಯ ಸಮುದಾಯದೊಂದಿಗಿನ ಸಂವಾದದ ಸಂದರ್ಭದಲ್ಲಿ ಮಾತನಾಡಿದ  ಪ್ರಧಾನಿ ಮೋದಿ "ನೀವು ನಿಮ್ಮ ಕನಿಷ್ಠ ಐದು ಸ್ನೇಹಿತರನ್ನು ಭಾರತಕ್ಕೆ ಭೇಟಿ ನೀಡಲು ಪ್ರೇರೇಪಿಸಬೇಕು... ಮತ್ತು ಜನರು 'ಚಲೋ ಇಂಡಿಯಾ' ಎಂದು ಹೇಳುತ್ತಾರೆ’’ ಎಂದರು

ಡಿಜಿಟಲ್ ಇಂಡಿಯಾ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತವು ಪ್ರಮುಖ ಡಿಜಿಟಲ್ ಮಾರುಕಟ್ಟೆಗೆ  ಬಾಗಿಲು ತೆರೆದಿದೆ ಹಾಗೂ ಇದು "ನವ ಭಾರತದ ನೈಜ ಕಥೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News