ಬೀದಿ ವ್ಯಾಪಾರಿಯಿಂದ ಬಲೂನ್‌ ಖರೀದಿಸಿ ಈದ್‌ ಆಚರಿಸುವ ಮಕ್ಕಳಿಗೆ ವಿತರಿಸಿದ ಪೊಲೀಸ್‌ ಅಧಿಕಾರಿ

Update: 2022-05-04 08:33 GMT
Photo: Screengrab/twitter/Mohtapraveenn

ಕಾನ್ಪುರ: ಉತ್ತರಪ್ರದೇಶದಲ್ಲಿ ಹಲವಾರು ಶಾಂತಿ ಕದಡುವ ಕೃತ್ಯಗಳು ವರದಿಯಾಗುತ್ತಿರುವ ನಡುವೆಯೇ ಕಾನ್ಪುರದಲ್ಲಿನ ವೀಡಿಯೊವೊಂದು ವೈರಲ್‌ ಆಗಿ ಜನರ ಹೃದಯ ಗೆದ್ದಿದ್ದು, ಈದ್‌ ಆಚರಿಸುತ್ತಿದ್ದ ಮಕ್ಕಳಿಗೆ ಬೀದಿ ವ್ಯಾಪಾರಿಯಿಂದ ಬಲೂನ್‌ ಗಳನ್ನು ಕೊಂಡು ವಿತರಿಸಿದ ಪೊಲೀಸ್‌ ಅಧಿಕಾರಿ ಜನರ ಮನ ಗೆದ್ದಿದ್ದಾರೆ. 

"ಈದ್‌ ಆಚರಿಸಬೇಕೆಂಬ ಧಾವಂತದಲ್ಲಿದ್ದ ಬಲೂನ್‌ ವ್ಯಾಪಾರಿಗೆ ತನ್ನ ಬಲೂನ್‌ ಮಾರಾಟವಾಗುವುದೇ ಸವಾಲಾಗಿತ್ತು. ಇನ್ನೊಂದೆಡೆ ಅಲ್ಲಿ ಸಾಮೂಹಿಕವಾಗಿ ಈದ್‌ ಆಚರಿಸುತ್ತಿದ್ದ ಮಕ್ಕಳಿಗೂ ಬಲೂನ್‌ ನ ಅವಶ್ಯಕತೆಯಿತ್ತು. ಇದನ್ನು ಮನಗಂಡ ಎಸಿಪಿ ತ್ರಿಪುರಾರಿ ಪಾಂಡೆ ಆ ವ್ಯಾಪಾರಿಯಿಂದ ಎಲ್ಲಾ ಬಲೂನ್‌ ಗಳನ್ನು ಖರೀದಿಸಿ ʼಈದ್‌ ಮುಬಾರಕ್‌ʼ ಹೇಳುತ್ತಾ ನೆರೆದಿದ್ದ ಎಲ್ಲಾ ಮಕ್ಕಳಿಗೆ ಹಂಚಿದರು" ಎಂದು ನವಭಾರತ್‌ ಟೈಮ್ಸ್‌ ನ ಪತ್ರಕರ್ತ ಪ್ರವೀಣ್‌ ಮೊಹ್ತಾ ವೀಡಿಯೊದೊಂದಿಗೆ ಟ್ವೀಟ್‌ ಮಾಡಿದ್ದಾರೆ.

ಈ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದ್ದು, ಈಗಾಗಲೇ 1,81,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹಲವು ನೆಟ್ಟಿಗರು ಪೊಲೀಸ್‌ ಅಧಿಕಾರಿಯ ಈ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News