×
Ad

"ತಮ್ಮ ತಂಡವನ್ನು ನಾಶಗೊಳಿಸುತ್ತಿದ್ದಾರೆ": ವಿರಾಟ್‌ ಕೊಹ್ಲಿ ವಿರುದ್ಧ ಆರ್‌ಸಿಬಿ ಅಭಿಮಾನಿಗಳ ಆಕ್ರೋಶ

Update: 2022-05-04 23:39 IST

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯಾಟದಲ್ಲಿ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಯ ನಿಧಾನಗತಿಯ ಪ್ರದರ್ಶನವು ಅಭಿಮಾನಿಗಳನ್ನು ನಿರಾಶೆಗೊಳಿಸಿದೆ. ಈ ಪಂದ್ಯಾಟದಲ್ಲಿ 33 ಎಸೆತಗಳನ್ನು ಎದುರಿಸಿದ ವಿರಾಟ್‌ ಕೊಹ್ಲಿ ಕೇವಲ 30 ರನ್‌ ಗಳಿಸಿ ಔಟಾಗಿದ್ದರು.

ಈ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ ಒಟ್ಟು 11 ಪಂದ್ಯಾಟಗಳಲ್ಲಿ 21.60 ಸರಾಸರಿಯನ್ನು ವಿರಾಟ್‌ ಕೊಹ್ಲಿ ಹೊಂದಿದ್ದು 216 ರನ್‌ ಗಳಿಸಿದ್ದಾರೆ. ಎರಡು ಬಾರಿ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿದ್ದ ಕೊಹ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದರು.

ಉತ್ತಮ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದ ಹಲವಾರು ಮಂದಿ ಅಭಿಮಾನಿಗಳು ಇದೀಗ ಅವರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಲು ಪ್ರಾರಂಭಿಸಿದ್ದಾರೆ. "ಕೊಹ್ಲಿ ಆರ್ಸಿಬಿಗಾಗಿ ಆಡುತ್ತಿದ್ದಾರೋ, ಚೆನ್ನೈ ಸೂಪರ್‌ ಕಿಂಗ್ಸ್‌ ಗೆ ಆಡುತ್ತಿದ್ದಾರೋ ಎಂದು ಅನುಮಾನವಾಗುತ್ತಿದೆ. ಟೆಸ್ಟ್‌ ಕ್ರಿಕೆಟ್‌ ನಂತೆ ಆಡುತ್ತಿದ್ದಾರೆ" ಎಂದು ಓರ್ವ ಕ್ರೀಡಾಭಿಮಾನಿ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News