×
Ad

ಐಪಿಎಲ್: ಕ್ರಿಸ್ ಗೇಲ್ ನಿರ್ಮಿಸಿದ್ದ ಟ್ವೆಂಟಿ-20 ವಿಶ್ವ ದಾಖಲೆ ಮುರಿದ ಡೇವಿಡ್ ವಾರ್ನರ್

Update: 2022-05-05 23:05 IST
Photo:twitter

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ತನ್ನ ಮಾಜಿ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ  ಐಪಿಎಲ್ ಪಂದ್ಯದಲ್ಲಿ ಔಟಾಗದೆ 92 ರನ್ ಗಳಿಸಿದರು. ಪ್ರಸಕ್ತ ಐಪಿಎಲ್ ನಲ್ಲಿ 4ನೇ  ಅರ್ಧಶತಕವನ್ನು ಗಳಿಸಿದರು. 2022 ರ ಆವೃತ್ತಿಯ ಐಪಿಎಲ್ ಗೆ  ಮುಂಚಿತವಾಗಿ ಹೈದರಾಬಾದ್ ಫ್ರಾಂಚೈಸಿಯಿಂದ ಬಿಡುಗಡೆಯಾದ ನಂತರ ಹೈದರಾಬಾದ್  ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿದ ವಾರ್ನರ್ ಟ್ವೆಂಟಿ-20  ಕ್ರಿಕೆಟ್ ನಲ್ಲಿ 89ನೇ ಅರ್ಧಶತಕವನ್ನು ತಲುಪಿದರು.  ಈ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.

89ನೇ ಅರ್ಧಶತಕವನ್ನು ಸಿಡಿಸಿದ ವಾರ್ನರ್ ಅವರು ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್  ದಾಖಲೆ ಹಿಂದಿಕ್ಕಿದರು. ಗೇಲ್  ಅವರು ಟ್ವೆಂಟಿ-20 ಕ್ರಿಕೆಟ್ ನಲ್ಲಿ  ಅತಿ ಹೆಚ್ಚು ಅರ್ಧಶತಕಗಳನ್ನು (88) ಸಿಡಿಸಿದ ದಾಖಲೆಯನ್ನು ಹೊಂದಿದ್ದರು.

ಗುರುವಾರ  ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ ಆಸೀಸ್ ಬ್ಯಾಟರ್ ವಾರ್ನರ್ ಅರ್ಧಶತಕವನ್ನು ತಲುಪಿದರು.

ಟ್ವೆಂಟಿ-20 ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದವರ ಪಟ್ಟಿ ಇಲ್ಲಿದೆ:

ಡೇವಿಡ್ ವಾರ್ನರ್ - 89*

ಕ್ರಿಸ್ ಗೇಲ್ -  88

ವಿರಾಟ್ ಕೊಹ್ಲಿ -  77

ಆ್ಯರೊನ್ ಫಿಂಚ್ -  70

ರೋಹಿತ್ ಶರ್ಮಾ - 69

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News