×
Ad

ಉಡುಪಿ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ 241 ಮಂದಿ ಗೈರು

Update: 2022-05-06 20:47 IST

ಉಡುಪಿ : ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಒಟ್ಟು ೨೪೧ ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ೧೪,೯೯೯ ಮಂದಿ ಪರೀಕ್ಷೆಗಾಗಿ ಹೆಸರು ನೊಂದಾಯಿಸಿ ಕೊಂಡಿದ್ದರೆ, ಇವರಲ್ಲಿ ೧೪,೭೫೮ ಮಂದಿ ಪರೀಕ್ಷೆಯನ್ನು ಬರೆದಿದ್ದು ಉಳಿದ ೨೪೧ ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಯು ಪ್ರಕಟಣೆ ತಿಳಿಸಿದೆ.

ವಿದ್ಯೋದಯ ಪಿಯು ಕಾಲೇಜಿನಲ್ಲಿ ಅತ್ಯಧಿಕ ೩೧ ಮಂದಿ ಇಂದಿನ ಪರೀಕ್ಷೆಗೆ ಹಾಜರಾಗಿಲ್ಲ. ಕುಂದಾಪುರದ ಆರ್.ಎನ್.ಶೆಟ್ಟಿ ಪಿಯು ಕಾಲೇಜಿನಲ್ಲಿ ೨೪, ಕುಂದಾಪುರದ ಸರಕಾರಿ ಪಿಯು ಕಾಲೇಜಿನಲ್ಲಿ ೧೬, ಬಿದ್ಕಲ್‌ಕಟ್ಟೆ ಸರಕಾರಿ ಪಿಯು ಕಾಲೇಜು ಹಾಗೂ ಕಾರ್ಕಳದ ಸರಕಾರಿ ಪಿಯು ಕಾಲೇಜಿನಲ್ಲಿ ತಲಾ  ೧೩ ಮಂದಿ ವಿದ್ಯಾರ್ಥಿ ಗಳು ಪರೀಕ್ಷೆಗೆ ಗೈರಾಗಿದ್ದಾರೆ. 

ಗುರುವಾರ ಜಿಲ್ಲೆಯಲ್ಲಿ ನಡೆದ ಇನ್‌ಫಾರ್ಮೇಶನ್ ಟೆಕ್ನಾಲಜಿ ಪರೀಕ್ಷೆಗೆ ೩೭ ಮಂದಿಯಲ್ಲಿ ೩೬ ಮಂದಿ ಹಾಜರಾಗಿದ್ದು ಒಬ್ಬರು ಗೈರಾಗಿದ್ದಾರೆ. ಅಟೋಮೊಬೈಲ್ ಪರೀಕ್ಷೆಗೆ ನೊಂದಾಯಿಸಿಕೊಂಡ ಎಲ್ಲಾ ೩೩ ಮಂದಿ ಹಾಜರಾಗಿದ್ದರೆ, ಬ್ಯೂಟಿ ಎಂಡ್ ವೆಲ್‌ನೆಸ್ ಪರೀಕ್ಷೆಗೆ ೧೫ ಮಂದಿಯಲ್ಲಿ ೧೧ ಮಂದಿ ಹಾಜರಾಗಿ ನಾಲ್ವರು ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News