ಶಿಯೋಮಿ ಅಧಿಕಾರಿಗಳಿಗೆ ಬೆದರಿಕೆ, ಬಲವಂತದ ಹೇಳಿಕೆ ಪಡೆದ ಆರೋಪವನ್ನು ನಿರಾಕರಿಸಿದ ಇಡಿ

Update: 2022-05-07 14:39 GMT

ಹೊಸದಿಲ್ಲಿ : ರಾಯಲ್ಟಿ ನೆಪದಲ್ಲಿ ವಿದೇಶಕ್ಕೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಶಿಯೋಮಿ ಇಂಡಿಯಾದ ಅಧಿಕಾರಿಗಳಿಂದ ಬಲವಂತದ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಪಡೆದುಕೊಂಡಿದೆ ಎಂಬ ಆರೋಪಗಳನ್ನು ಇಡಿ ನಿರಾಕರಿಸಿದೆ.

“ಕಂಪೆನಿಯ ಅಧಿಕಾರಿಗಳಿಂದ ಬಲವಂತವಾಗಿ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ ಎಂಬ ಆರೋಪಗಳು ಸುಳ್ಳು ಮತ್ತು ಆಧಾರರಹಿತ, ವಿವಿಧ ಸಂದರ್ಭಗಳಲ್ಲಿ ಕಂಪನಿಯ ಅಧಿಕಾರಿಗಳು ನಿರ್ದೇಶನಾಲಯದ ಮುಂದೆ ಹಾಜರಾಗಿ ಅತ್ಯಂತ ಪೂರಕ ವಾತಾವರಣದಲ್ಲಿ ಸ್ವಯಂಪ್ರೇರಿತರಾಗಿ ಹೇಳಿಕೆಗಳನ್ನು ನೀಡಿದ್ದಾರೆ,'' ಎಂದು ಜಾರಿ ನಿರ್ದೇಶನಾಲಯ ತನ್ನ ಹೇಳಿಕೆಯಲ್ಲಿ ಇಂದು ತಿಳಿಸಿದೆ.

 ಭಾರತದಲ್ಲಿನ ತನ್ನ ಮಾಜಿ ಆಡಳಿತ ನಿರ್ದೇಶಕ ಮನು ಕುಮಾರ್ ಜೈನ್ ಹಾಗೂ ಪ್ರಸ್ತುತ ಮುಖ್ಯ ಹಣಕಾಸು ಅಧಿಕಾರಿ ಸಮೀರ್ ಬಿ ಎಸ್ ರಾವ್ ಮತ್ತವರ ಕುಟುಂಬಗಳಿಗೆ ಗಂಭೀರ ಪರಿಣಾಮದ ಎಚ್ಚರಿಕೆಯನ್ನು ಜಾರಿ ನಿರ್ದೇಶನಾಲಯ ನೀಡಿದೆ ಎಂಧು ಕಂಪೆನಿ ಈ ಹಿಂದೆ ಆರೋಪಿಸಿತ್ತು.

ಕಂಪೆನಿಯ ಭಾರತೀಯ ಬ್ಯಾಂಕ್ ಖಾತೆಗಳಲ್ಲಿದ್ದ 725 ಮಿಲಿಯನ್ ಡಾಲರ್ ಹಣವನ್ನು ಕಳೆದ ವಾರ ತನಿಖಾ ಏಜನ್ಸಿ ವಶಪಡಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News