ಅಸಾನಿ ಚಂಡಮಾರುತ: ಒಡಿಶಾ, ಬಂಗಾಳ, ಆಂಧ್ರದಲ್ಲಿ ಮಂಗಳವಾರದಿಂದ ಭಾರೀ ಮಳೆ

Update: 2022-05-08 07:43 GMT

ಹೊಸದಿಲ್ಲಿ: ಮಂಗಳವಾರದಿಂದ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದಲ್ಲಿ ಅಸಾನಿ ಚಂಡಮಾರುತವು ಭಾರೀ ಮಳೆಗೆ ಕಾರಣವಾಗಲಿದೆ ಹಾಗೂ ಮುಂದಿನ 24 ಗಂಟೆಯಲ್ಲಿ ಚಂಡಮಾರುತವು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದಾಗಿ ndtv ವರದಿ ಮಾಡಿದೆ.

 ಚಂಡಮಾರುತವು ಒಡಿಶಾ, ಆಂಧ್ರಪ್ರದೇಶದ ಕರಾವಳಿಯ ಸಮಾನಾಂತರದಲ್ಲಿ ಚಲಿಸುವ ಸಾಧ್ಯತೆಯನ್ನೂ ಅಂದಾಜಿಸಲಾಗಿದೆ. ಆಗ್ನೇಯ ಬಂಗಾಳ ಕೊಲ್ಲಿಯ ಆಳದಲ್ಲಿ ಒತ್ತಡ ಉಂಟಾಗಿದ್ದು, ಗಂಟೆಗೆ 16 ಕಿಮೀ ವೇಗದಲ್ಲಿ ಚಲಿಸುತ್ತಿದೆ. ಕಾರ್ ನಿಕೋಬಾರ್‌ನಿಂದ ಸುಮಾರು 450 ಕಿಮೀ ಪಶ್ಚಿಮ-ವಾಯುವ್ಯಕ್ಕೆ, ಪೋರ್ಟ್ ಬ್ಲೇರ್‌ನಿಂದ 380 ಕಿಮೀ ಪಶ್ಚಿಮಕ್ಕೆ (ಅಂಡಮಾನ್ ದ್ವೀಪಗಳು), (ಆಂಧ್ರಪ್ರದೇಶದ) ವಿಶಾಖಪಟ್ಟಣದಿಂದ 970 ಕಿಮೀ ಆಗ್ನೇಯ ಮತ್ತು 1030 ಕಿಮೀ. (ಒಡಿಶಾದ) ಪುರಿಯ ದಕ್ಷಿಣ-ಆಗ್ನೇಯಕ್ಕೆ ಚಂಡಮಾರುತ ಕೇಂದ್ರೀಕರಿಸಿದೆ ಎಂದು ndtv ವರದಿ ಮಾಡಿದೆ.

 ಈ ವ್ಯವಸ್ಥೆಯು ಭಾನುವಾರ ಸಂಜೆಯವರೆಗೆ ಸೈಕ್ಲೋನಿಕ್ ಚಂಡಮಾರುತದ ರೂಪದಲ್ಲಿ ಉಳಿಯುತ್ತದೆ ಮತ್ತು ನಂತರ ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳುತ್ತದೆ. ಇದು ಮೇ 10 ರಾತ್ರಿಯವರೆಗೆ ಈ ರೂಪದಲ್ಲಿ ಮುಂದುವರಿಯುತ್ತದೆ. ತರುವಾಯ, ಇದು ಸಮುದ್ರದಲ್ಲಿ ಹಬೆಯನ್ನು ಕಳೆದುಕೊಂಡು ಮೇ 11 ಮತ್ತು 12 ರಂದು ಮತ್ತೊಂದು ಚಂಡಮಾರುತವಾಗಿ ಪರಿಣಮಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News