×
Ad

ವಿನಾಯಕ ಹೆಗಡೆ ಕಲಗದ್ದೆಗೆ 'ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ'

Update: 2022-05-08 15:38 IST

ಉಡುಪಿ, ಮೇ 8: ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಅವರ ತಂದೆ, ಅರೆಹೊಳೆ ಗಣಪಯ್ಯ ಅವರ ಹೆಸರಿನಲ್ಲಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಾಧಕರಿಗೆ ನೀಡುವ ವಾರ್ಷಿಕ 'ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ' ಗೆ 2022 ನೇ ಸಾಲಿನಲ್ಲಿ ಉತ್ತರ ಕನ್ನಡ‌ಜಿಲ್ಲೆಯ ಸಿದ್ಧಾಪುರ ಸಮೀಪದ ಕಲಗದ್ದೆಯ ವಿನಾಯಕ ಹೆಗಡೆ ಆಯ್ಕೆಯಾಗಿದ್ದಾರೆ.

ಯಕ್ಷಗಾನ ಕಲಾವಿದರಾಗಿ, ಕಲಗದ್ದೆಯಲ್ಲಿ ಯಕ್ಷನಾಟ್ಯ ವಿನಾಯಕ ದೇವಸ್ಥಾನವನ್ನು ಸ್ಥಾಪಿಸಿ, ನಿರಂತರ ಕಲಾ ಸೇವೆ  ಮಾಡುತ್ತಿರುವ ಇವರು, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನದ ಮೂಲಕ ಪ್ರದರ್ಶನಗಳನ್ನೂ ನೀಡುತ್ತಿದ್ದಾರೆ. ಕಲಗದ್ದೆಯನ್ನು ರಾಜ್ಯಾದ್ಯಂತ ಪ್ರೇಕ್ಷಣೀಯ ಕ್ಷೇತ್ರವನ್ನಾಗಿ, ಏಕವ್ಯಕ್ತಿಯಾಗಿ ನಿರ್ಮಿಸಿದ್ದಾರೆ.

ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಹಾಗೂ ಗೌರವ ಧನವನ್ನೊಳಗೊಂಡಿದ್ದು ಮೇ 15ರಂದು ಅರೆಹೊಳೆಯಲ್ಲಿ ನಡೆಯಲಿರುವ ಪ್ರಥಮ ವರ್ಷದ ಗಣಪಯ್ಯ ಸಂಸ್ಮರಣೆಯಂದು ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನಿಸಲಾಗುವುದು. ಈ ಪ್ರಶಸ್ತಿಯನ್ನು ಇನ್ನು ಪ್ರತೀ ವರ್ಷ ಗಣಪಯ್ಯನವರ ಕುಟುಂಬವು ನೀಡುತ್ತದೆ ಎಂದು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News