×
Ad

ಊಹಾಪೋಹಕ್ಕೆ ಕಾರಣವಾದ ಸಾವಿನ ಕುರಿತು ಎಲಾನ್ ಮಸ್ಕ್ ಟ್ವೀಟ್!

Update: 2022-05-09 11:06 IST
ಎಲಾನ್ ಮಸ್ಕ್ (PTI)

ಹೊಸದಿಲ್ಲಿ: ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ತಮ್ಮ ಟ್ವೀಟ್‍ಗಳ  ಮೂಲಕ ಬಿರುಗಾಳಿಯೆಬ್ಬಿಸುವುದಕ್ಕೆ ಹೆಸರುವಾಸಿಯಾದವರು. ಇಂದು ಅವರು "ಸಂಶಯಾಸ್ಪದ ಸನ್ನಿವೇಶದಲ್ಲಿ'' ಸಾವು ಎಂಬ ಕುರಿತು ಟ್ವೀಟ್ ಮಾಡಿ ಕುತೂಹುಲ ಮೂಡಿಸುವುದರೊಂದಿಗೆ ಗಾಬರಿ ಹುಟ್ಟಿಸಿದ್ದಾರೆ.

"ನಾನು ಸಂಶಯಾಸ್ಪದ ಸನ್ನಿವೇಶಗಳಲ್ಲಿ ಸತ್ತರೆ, ಅದು ತಿಳಿಯುವುದಕ್ಕೆ ಒಳ್ಳೆಯದು,'' ಎಂದು ಇಂದು ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಮಸ್ಕ್ ಅವರು ಇನ್ನೊಂದು ಟ್ವೀಟ್ ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು "ಉಕ್ರೇನ್‍ನ ಫ್ಯಾಸಿಸ್ಟ್ ಪಡೆಗಳಿಗೆ ಮಿಲಿಟರಿ ಸಂವಹನ ಉಪಕರಣಗಳನ್ನು ಒದಗಿಸಿದ್ದಾರೆ ಅದಕ್ಕಾಗಿ ಅವರು ಬೆಲೆ ತೆರಬೇಕು,'' ಎಂಬರ್ಥದಲ್ಲಿ ಬರೆಯಲಾಗಿತ್ತು.

ಈ ಉಪಕರಣವನ್ನು ಉಕ್ರೇನ್‍ಗೆ ಪೆಂಟಗನ್ ಒದಗಿಸಿತ್ತು ಎಂದೂ ಆ ಪೋಸ್ಟ್ ನಲ್ಲಿ ಸಂದೇಶ ಹೇಳಿತ್ತು. ಅದನ್ನೇ ಮಸ್ಕ್ ಮರುಪೋಸ್ಟ್ ಮಾಡಿದ್ದರು.

ಯುದ್ಧದ ನಡುವೆ ಉಕ್ರೇನ್‍ಗೆ ಸಹಾಯ ಮಾಡಿದ್ದಕ್ಕಾಗಿ ಮಸ್ಕ್ ಅವರು ರಷ್ಯಾದಿಂದ ಬೆದರಿಕೆ ಎದುರಿಸುತ್ತಿದ್ದಾರೆಯೇ ಎಂಬ ಊಹಾಪೋಹಕ್ಕೆ ಈ  ಟ್ವೀಟ್ ಕಾರಣವಾಗಿದೆ.

ಫೆಬ್ರವರಿಯಲ್ಲಿ ಮಸ್ಕ್ ಅವರ ಕಂಪೆನಿ ಸ್ಪೇಸ್‍ಎಕ್ಸ್ ನ ಸ್ಟಾರ್ ಲಿಂಕ್ ಉಪಗ್ರಹ ಬ್ರಾಡ್‍ಬ್ಯಾಂಡ್ ಸೇವೆಯನ್ನು ಉಕ್ರೇನ್‍ನ ಒಬ್ಬ ಸಚಿವರ ಮನವಿಯಂತೆ ಆರಂಭಿಸಲಾಗಿತ್ತು.

ಮಸ್ಕ್ ಅವರ ಇಂದಿನ 'ಸಂಶಯಾಸ್ಪದ ಸನ್ನಿವೇಶಗಳಲ್ಲಿ ಸಾವು' ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಕೆಲವರು ಮಸ್ಕ್ ಅವರು ಅಮಲಿನಲ್ಲಿದ್ದಾರೆಯೇ ಎಂದು ಪ್ರಶ್ನಿಸಿದರೆ ಇನ್ನು ಕೆಲವರು, ದೊಡ್ಡ ಮೊತ್ತದ ತೆರಿಗೆಗಳು ಅವರನ್ನು ಬಾಧಿಸುತ್ತಿವೆ ಎಂದರು. ಇನ್ನು ಕೆಲವರು `ಸುಧಾರಣೆಗಾಗಿ' ಮಸ್ಕ್ ಬಹಳ ಕಾಲ ಬದುಕಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News